ಇಂದೋರ್: ತರಬೇತಿ ಪಡೆಯದ ಪೈಲಟ್’ನಿಂದ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ಮಾಡಿಸಿದ ವಿಸ್ತಾರ ಏರ್’ಲೈನ್ಸಿಗೆ ಡಿಜಿಸಿಎ 10 ಲಕ್ಷ ದಂಡವನ್ನು ವಿಧಿಸಿದೆ. ವಾಯುಯಾನ ನಿಯಂತ್ರಕ (ಡಿಜಿಸಿಎ) ವಿಸ್ತಾರ ವಿಮಾನ ಸಂಸ್ಥೆಗೆ ದಂಡ ವಿಧಿಸಿದೆ.
ಪ್ರಯಾಣಿಕರಿದ್ದ ವಿಮಾನವನ್ನು ಇಂದೋರ್ ನ ವಿಮಾನ ನಿಲ್ದಾಣದಲ್ಲಿ ಸಿಮ್ಯುಲೇಟರ್ ನಲ್ಲಿ ಅಗತ್ಯ ತರಬೇತಿ ಪಡೆಯದ ಫರ್ಸ್ಟ್ ಆಫೀಸರ್ ಪೈಲಟ್ ವಿಮಾನವನ್ನು ಲ್ಯಾಂಡ್ ಮಾಡಿದ್ದಾನೆ. ಇದು ಪ್ರಯಾಣಿಕರ ಜೀವಕ್ಕೆ ಅಪಾಯ ತರಲಿವೆ, ಈ ಹಿನ್ನೆಲೆಯಲ್ಲಿ ವಿಸ್ತಾರ ಸಂಸ್ಥೆಗೆ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಮ್ಯುಲೇಟರ್ ನಲ್ಲಿ ತರಬೇತಿ ಪಡೆಯದ ಫರ್ಸ್ಟ್ ಆಫೀಸರ್ ವಿಮಾನವನ್ನು ಲ್ಯಾಂಡ್ ಮಾಡುವಂತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.