ಮಂಗಳೂರು, ಬೆಂಗಳೂರು, ಮೈಸೂರಿನಲ್ಲಿ ಅತೀ ಹೆಚ್ಚಿನ ವಾಯು ಮಾಲಿನ್ಯ: ಗ್ರೀನ್ ಪೀಸ್ ವರದಿ

Prasthutha|

ಬೆಂಗಳೂರು: ಮಂಗಳೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಆತಂಕಕಾರಿ ಮಾಹಿತಿಯನ್ನು ಗ್ರೀನ್ ಪೀಸ್ ವರದಿ ಮಾಡಿದೆ.  

- Advertisement -

 ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನ ವರದಿಯನ್ನು ಪರಿಸರ ಕಾಳಜಿ ಕುರಿತು ಜಾಗೃತಿ ಮೂಡಿಸುವ ಸಂಸ್ಥೆಯಾದ ಗ್ರೀನ್ ಪೀಸ್ ಉಲ್ಲೇಖಿಸಿದ್ದು, ದಕ್ಷಿಣಭಾರತದ 10 ವಾಯುಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ರಾಜ್ಯದ ಮೂರು ನಗರಗಳು ಸ್ಥಾನಪಡೆದಿವೆ.

WHO ನಿಗದಿ ಪಡಿಸಿರುವಂತೆ ಉಸಿರಾಟ ಯೋಗ್ಯ ಗಾಳಿಯಲ್ಲಿ ಇರಬೇಕಾದ ಕಲುಷಿತ ಕಣಗಳ ಮಟ್ಟಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿನ ಮಾಲಿನ್ಯ ಮೈಸೂರು ನಗರದಲ್ಲಿ ಕಂಡುಬಂದಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ 6- 7 ಪಟ್ಟು ಹೆಚ್ಚು ಕಲುಷಿತ ಕಣಗಳ ಮಟ್ಟ ಕಂಡುಬಂದಿದೆ.

- Advertisement -



Join Whatsapp