ಮಾರ್ಗ ಮಧ್ಯೆ ಪ್ರಯಾಣಿಕ ಸಾವು: ಮೂರು ಗಂಟೆಗಳ ಪ್ರಯಾಣದ ಬಳಿಕ ಮರಳಿದ ವಿಮಾನ

Prasthutha|

ನವದೆಹಲಿ: ಮಾರ್ಗ ಮಧ್ಯೆ ಪ್ರಯಾಣಿಕನೋರ್ವ ಮೃತಪಟ್ಟ ಕಾರಣ, ದೆಹಲಿ-ನೆವಾರ್ಕ್ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಮೂರು ಗಂಟೆಗಳ ಬಳಿಕ  ಮತ್ತೆ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದ ಘಟನೆ ಶನಿವಾರ ನಡೆದಿದೆ.

- Advertisement -

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ AI-105 ವಿಮಾನದಲ್ಲಿ  ಪತ್ನಿ ಸಮೇತ ಅಮೆರಿಕದ ನೆವಾರ್ಕ್’ಗೆ ಪ್ರಯಾಣ ಬೆಳಸಿದ್ದ ಯುಎಸ್‌ ಪ್ರಜೆಯೊಬ್ಬರು ದಾರಿ ಮಧ್ಯೆದಲ್ಲಿಯೇ ಮೃತಪಟ್ಟ ಕಾರಣ ವಿಮಾನವು ಮರಳಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ಪರಿಶೀಲಿಸಿದ ಬಳಿಕ ಪ್ರಯಾಣಿಕನ ಸಾವನ್ನು ದೃಢೀಕರಿಸಲಾಯಿತು ಎಂದು ಅಧಿಕಾರಿಗಳು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಫ್ಲೈಟ್ ಟೈಮ್ ಡ್ಯೂಟಿ ಲಿಮಿಟೇಶನ್-FDTL ನಿಯಮಗಳ ಪ್ರಕಾರ,  ಮತ್ತೊಂದು ಬ್ಯಾಚ್ ಸಿಬ್ಬಂದಿ ಜೊತೆ ಅದೇ ವಿಮಾನವು 4 ಗಂಟೆಗೆ ಮತ್ತೆ ಟೇಕ್ ಆಫ್ ಆಗುವ ನಿರೀಕ್ಷೆಯಿದೆ. ಘಟನೆಯ ಸಂಪೂರ್ಣ ವಿವರಗಳನ್ನು ವಿಮಾನ ನಿಲ್ದಾಣ ಪೊಲೀಸರಿಗೆ ವರದಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

- Advertisement -



Join Whatsapp