ಪೊಲೀಸ್ ಅಧಿಕಾರಿಗೆ ನಡುರಸ್ತೆಯಲ್ಲೇ ಕಪಾಳಮೋಕ್ಷ । ನಾಲ್ವರ ಬಂಧನ

Prasthutha|

ಲಕ್ನೋ: ಪೊಲೀಸ್ ಅಧಿಕಾರಿಗೆ ನಡು ರಸ್ತೆಯಲ್ಲೇ ಕಪಾಲಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸ್ ಅಧಿಕಾರಿಗೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

- Advertisement -

ಬಂಧಿತರನ್ನು ಅಶಿಶ್ ಶುಕ್ಲಾ, ಪ್ರಂಜುಲ್ ಮಾಥೂರ್, ಪ್ರಿಯಾಂಕ್ ಮಾಥೂರ್ ಮತ್ತು ಪ್ರವೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ.

26 ಸೆಕೆಂಡ್ ವೀಡಿಯೋದಲ್ಲಿ ಸಮವಸ್ತ್ರದಾರಿಯಾದ ಸಬ್ ಇನ್ಸ್ ಪೆಕ್ಟರ್ ಪೊಲೀಸ್ ಅಧಿಕಾರಿಗೆ ವಿನೋದ್ ಕುಮಾರ್ ಎಂಬಾತ ಹಲ್ಲೆ ನಡೆಸಿರುವುದು ವೈರಲ್ ಆಗಿದೆ. ಆರೋಪಿಗಳಲ್ಲಿ ಓರ್ವನಾದ ಆಶಿಶ್ ಶುಕ್ಲಾ ಎಂಬಾತ ಏರು ಧ್ವನಿಯಲ್ಲಿ ಬೆದರಿಕೆ ಹಾಕುತ್ತಿರುವುದು ವೀಡಿಯೋದಲ್ಲಿದೆ.

- Advertisement -

ಘಟನೆಯ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರಾಚಿ ಸಿಂಗ್, ನಡು ರಸ್ತೆಯಲ್ಲೇ ಅಧಿಕಾರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿಸಿದರು.

Join Whatsapp