ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ಸಾಧ್ಯತೆ ಇಲ್ಲ: ಏಮ್ಸ್ ನಿರ್ದೇಶಕ

Prasthutha|

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ಸಾಧ್ಯತೆ ಇಲ್ಲ ಎಂದು ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.

- Advertisement -

ಭಯಾನಕ ಕೋವಿಡ್ ಮೂರನೇ ಅಲೆಯ ಸಾಧ್ಯತೆಗಳು ದೇಶದಲ್ಲಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಬೂಸ್ಟರ್ ಲಸಿಕೆಯನ್ನು ಪ್ರತಿಯೊಬ್ಬರಿಗೂ ಕಡ್ಡಾಯಗೊಳಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಹೊಸ ಪ್ರಕರಣಗಳೂ ಕೂಡ ಈಗ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿಲ್ಲ. ಶೂನ್ಯ-ಪಾಸಿಟಿವಿಟಿ ದರಗಳು ಸಹ ಹೆಚ್ಚಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದು ಇದು ಸೂಚಿಸುತ್ತದೆ. ಆದರೆ ಭವಿಷ್ಯದಲ್ಲಿ ನಮಗೆ ಬೂಸ್ಟರ್ ಲಸಿಕೆಗಳು ಬೇಕಾಗಬಹುದು. ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಅನ್ನು ಹೆಚ್ಚಿನ ಜನರಿಗೆ ತಲುಪಿಸಲು ಈಗ ಒತ್ತು ನೀಡಬೇಕಾಗಿದೆ. ಅದರ ಸಂಖ್ಯೆಗಳು ಹೆಚ್ಚಾದಂತೆ ನಮ್ಮ ಭದ್ರತೆಯೂ ಹೆಚ್ಚಾಗುತ್ತದೆ ಎಂದು ರಣದೀಪ್ ಗುಲೇರಿಯಾ ಹೇಳಿದರು.

Join Whatsapp