ರಾಜ್ಯಾದ್ಯಂತ 15 ಅಧಿಕಾರಿಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ: ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆ

Prasthutha|

ಬೆಂಗಳೂರು: ಕೆಲ ದಿನಗಳ ಬಿಡುವಿನ ಬಳಿಕ ಬೃಹತ್ ಪ್ರಮಾಣದ ಭ್ರಷ್ಟರ ಬೇಟೆಯಾಡಿರುವ ಭ್ರಷ್ಟಾಚಾರ ನಿಗ್ರಹ ದಳ-ಎಸಿಬಿ ಅಧಿಕಾರಿಗಳು ಕೆಎಎಸ್ ಅಧಿಕಾರಿ ಸೇರಿ 15 ಮಂದಿಯನ್ನು ಬಲೆಗೆ ಕೆಡವಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಹಚ್ಚಿದ್ದಾರೆ.

- Advertisement -

ರಾಜ್ಯದ ಸುಮಾರು 68 ಕ್ಕೂ ಹೆಚ್ಚು ಕಡೆಗಳಲ್ಲಿ 8 ಮಂದಿ ಎಸ್ ಪಿ ಗಳು,100 ಮಂದಿ ಅಧಿಕಾರಿಗಳು ಸೇರಿ ಒಟ್ಟು 408 ಸಿಬ್ಬಂದಿ ಏಕಕಾಲದಲ್ಲಿ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ನಗದು ಚಿನ್ನಾಭರಣಗಳು ಐಷಾರಾಮಿ ವಸ್ತುಗಳು ನಿವೇಶನಗಳು ಮನೆಗಳನ್ನು ಪತ್ತೆಹಚ್ಚಿ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ದೂರುಗಳು ಬಂದ ಹಿನ್ನಲೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಬೆಂಗಳೂರಿನ ನಾಲ್ವರು ಅಧಿಕಾರಿಗಳು ಸೇರಿದಂತೆ 15 ಮಂದಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

- Advertisement -

ನಗರದ ಸಕಾಲ ಕೆಎಎಸ್ ಅಧಿಕಾರಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಜಿಯೋಥೆರಪಿಸ್ಟ್ ರಾಜಶೇಖರ, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ, ಬಿಬಿಎಂಪಿ ಸಿಬ್ಬಂದಿ ಬಾಗಲಗುಂಟೆಯ ಗಿರಿ ಸೇರಿ ಒಟ್ಟು ನಾಲ್ವರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿಯ ವೇಳೆ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಯಾಗಿದೆ ಎಂದು ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮಂಗಳೂರು ಸ್ಮಾರ್ಟ್ ಸಿಟಿ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಸ್.ಲಿಂಗೇಗೌಡ ಅವರ ಕಚೇರಿ ನಿವಾಸ, ಮಂಡ್ಯ ಹೆಚ್ಎಲ್ಬಿಸಿ , ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಶ್ರೀನಿವಾಸ್, ದೊಡ್ಡಬಳ್ಳಾಪುರದ ಕಂದಾಯ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ, ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ಅಧಿಕಾರಿ ವಾಸುದೇವ್, ನಂದಿನಿ ಡೈರಿ ಜನರಲ್ ಮ್ಯಾನೇಜರ್ ಬಿ. ಕೃಷ್ಣಾರೆಡ್ಡಿ,ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಸವದತ್ತಿ, ಬೈಲಹೊಂಗಲದಲ್ಲಿ ಕಾರ್ಯನಿರ್ವಹಿಸಿದ್ದ ಸಹಕಾರ ಇಲಾಖೆ ಅಧಿಕಾರಿ ಎ.ಕೆ.ಮಸ್ತಿ, ಗೋಕಾಕ್ನ ಹಿರಿಯ ಮೋಟರ್ ಇನ್ಸ್ಪೆಕ್ಟರ್ ಸದಾಶಿವ ಮರಲಿಂಗಣ್ಣನವರ್, ಹೆಸ್ಕಾಂನ ಗ್ರೂಪ್ ಸಿ ನೌಕರ ನೇತಾಜಿ ಹೀರಾಜಿ ಪಾಟೀಲ್, 2021ರ ಜುಲೈನಲ್ಲಿ ನಿವೃತ್ತಿ ಹೊಂದಿದ್ದ ಬಳ್ಳಾರಿ ಸಬ್ ರಿಜಿಸ್ಟರ್ ಕೆ.ಎಸ್.ಶಿವನಂದ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಸಿಯೋಥೆರಪಿಸ್ಟ್ ರಾಜಶೇಖರ್, ಜೇವರ್ಗಿ ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಎಸ್.ಎಂ.ಬಿರಾದರ್, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ ಸೇರಿ15 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ದಾಳಿಯ ವೇಳೆ ಆದಾಯ ಮೀರಿ ಗಳಿಸಿರುವ ನೂರಾರು ಪಟ್ಟು ಅಕ್ರಮ ಹಾಗೂ ದಾಖಲೆ ಇಲ್ಲದ ಹಣ ಕೆಜಿಗಟ್ಟಲೆ ಚಿನ್ನಾಭರಣ, ನಿವೇಶನ,ಮನೆಗಳು,ಸಂಬಂಧಿಕರ ಹೆಸರಿನಲ್ಲಿ ಮಾಡಿರುವ ಅಕ್ರಮ ಆಸ್ತಿ ಪತ್ತೆಯಾಗಿದೆ.

ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಗಳ ಕಚೇರಿ ಮನೆಗಳು ಆಸ್ತಿ ಪಾಸ್ತಿಗಳ ಮೇಲೆ ಇಂದು ಮುಂಜಾನೆಯಿಂದ ನಡೆದಿರುವ ದಾಳಿಯು ಇನ್ನೂ ಮುಂದುವರೆದಿದ್ದು ವಶಪಡಿಸಿಕೊಂಡ ಆಸ್ತಿಪಾಸ್ತಿಗಳು ಸ್ವತ್ತುಗಳ ಪರಿಶೀಲನೆ ನಡೆಸಲಾಗಿದೆ ಒಂದೆರಡು ದಿನಗಳಲ್ಲಿ ಅವುಗಳ ಒಟ್ಟಾರೆ ಮೌಲ್ಯ ದೊರೆಯಲಿದೆ ಎಂದರು.

1.ಕೆ.ಎಸ್ ಲಿಂಗೇಗೌಡ, ಎಕ್ಸಿಕ್ಯೂಟಿವ್ ಇಂಜಿನಿಯರ್ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರು

  1. ಶ್ರೀನಿವಾಸ್ ಕೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಎಚ್.ಎಲ್.ಬಿ.ಸಿ ಮಂಡ್ಯ
  2. ಲಕ್ಷ್ಮಿಕಾಂತಯ್ಯ, ರೆವಿನ್ಯೂ ಇನ್ಸ್ಪೆಕ್ಟರ್ ದೊಡ್ಡಬಳ್ಳಾಪುರ.
  3. ವಾಸುದೇವ್, ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರ ಬೆಂಗಳೂರು.
  4. ಬಿ.ಕೃಷ್ಣಾರೆಡ್ಡಿ, ಜನರಲ್ ಮ್ಯಾನೇಜರ್, ನಂದಿನಿ ಡೈರಿ ಬೆಂಗಳೂರು.
  5. ಟಿ.ಎಸ್.ರುದ್ರೇಶಪ್ಪ, ಜಾಯಿಂಟ್ ಡೈರೆಕ್ಟರ್, ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್ ಗದಗ
  6. ಎ.ಕೆ.ಮಸ್ತಿ, ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್, ಸವದತ್ತಿ ಡೆಪ್ಯೂಟೇಷನ್, ಬೈಲಹೊಂಗಲ
  7. ಸದಾಶಿವ ಮರಲಿಂಗಣ್ಣನವರ್, ಸೀನಿಯರ್ ಮೋಟಾರ್ ಇನ್ಸ್ಪೆಕ್ಟರ್ ಗೋಕಾಕ್
    9.ನಾತಾಜೀ ಹೀರಾಜಿ ಪಾಟೀಲ್, ಗ್ರೂಪ್ ಸಿ ಬೆಳಗಾಂ ಹೆಸ್ಕಾಂ
    10.ಕೆ.ಎಸ್.ಶಿವಾನಂದ್, ರಿಟೈರ್ಡ್ ಸಬ್ ರಿಜಿಸ್ಟರ್, ಬಳ್ಳಾರಿ
  8. ರಾಜಶೇಖರ್, ಫಿಜಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ
  9. ಮಾಯಣ್ಣ.ಎಂ, ಎಫ್.ಡಿ.ಸಿ ಬಿಬಿಎಂಪಿ ಬೆಂಗಳೂರು ರೋಡ್ಸ್ & ಇನ್ಫ್ರಾಸ್ಟ್ರಕ್ಚರ್
  10. ಎಲ್.ಸಿ.ನಾಗರಾಜ್, ಸಕಾಲ, ಅಡ್ಮಿನಿಸ್ಟ್ರೇಷನ್ ಆಫಿಸರ್, ಬೆಂಗಳೂರು
  11. ಜಿ.ವಿ.ಗಿರಿ, ಡಿ ಗ್ರೂಪ್ ಸಿಬ್ಬಂದಿ ಬಿಬಿಎಂಪಿ ಯಶವಂತಪುರ
  12. ಎಸ್.ಎಂ.ಬಿರಾದಾರ್, ಜಾಯಿಂಟ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ, ಜೇವರ್ಗಿ.

ಬಾತ್ ರೂಮ್ ಪೈಪ್ ನಲ್ಲಿ ಕಂತೆ ಕಂತೆ ನೋಟು !

ಕಲಬುರಗಿ ಲೋಕೋಪಯೋಗಿ ಇಲಾಖೆ ಜೆಇ ಶಾಂತಗೌಡ ಬಿರಾದಾರ್ ಅವರ ಮನೆಯ ಬಾತ್ ರೂಮ್ ಪೈಪ್ ನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ.

ಎಸಿಬಿ ದಾಳಿ ವೇಳೆ ಅವರು ಮನೆಯ ಬಾಗಿಲು ತೆರೆಯಲು ನಿರಾಕರಿಸಿದ್ದರು. ಈ ವೇಳೆ ಹಣವನ್ನು ಬಾತ್ ರೂಮ್ ಪೈಪ್ ನಲ್ಲಿ ಕಂತೆ ಕಂತೆ ನೋಟುಗಳನ್ನು ತುರುಕಿದ್ದಾರೆ. ಈ ವಿಷಯ ಅರಿತ ಎಸಿಬಿ ಅಧಿಕಾರಿಗಳು ಪ್ಲಂಬರ್ ಒಬ್ಬನನ್ನು ಕರೆಸಿ ಪೈಪ್ ಕತ್ತರಿಸಿ ಅದರೊಳಗಿದ್ದ ನೋಟುಗಳನ್ನು ಹೊರತೆಗೆದಿದ್ದಾರೆ. ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

Join Whatsapp