ದುಬೈ ಮರುಭೂಮಿಯಲ್ಲಿ ಭತ್ತ ಬೆಳೆದ ಮಲಯಾಳಿ ಸಹೋದರರು!

Prasthutha|

ತಿರುವನಂತಪುರ: ಉರಿಯುತ್ತಿರುವ ಮರುಭೂಮಿಯನ್ನು ಉತ್ತಮ ಫಲವತ್ತಾದ ಮಣ್ಣನ್ನಾಗಿ ಪರಿವರ್ತಿಸಬಹುದು ಎಂಬುದನ್ನು ಕೇರಳದ ಸಹೋದರರು ಸಾಬೀತುಪಡಿಸಿದ್ದಾರೆ.

- Advertisement -

ಕೆರಳದ ಆಲಂಗೋಡು ಪಂಚಾಯತ್ ವ್ಯಾಪ್ತಿಯ ಪೆರುಮೂಕ್ಕು ನಿವಾಸಿಗಳಾದ ರಶೀದ್, ಅಶ್ರಫ್ ಮತ್ತು ಅಲಿ ಎಂಬ ಮೂವರು ಸಹೋದರರು ಊರಿನ ಹಸಿರನ್ನು ದುಬೈನ ಮರುಭೂಮಿಯಲ್ಲಿ ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಮೂವರು ಕೆಲಸ ಮಾಡುತ್ತಿರುವ ದುಬೈನ ಅಲ್ ಖವಾನೀಜ್‌ ಎಂಬ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ.

ಮರುಭೂಮಿಯಲ್ಲಿ ಭತ್ತದ ಕೃಷಿ ಮಾಡುವ ಇರಾದೆ ವ್ಯಕ್ತಪಡಿಸಿದ ರಶೀದ್‌ಗೆ ಹಿರಿಯ ಸಹೋದರರಾದ ಅಶ್ರಫ್ ಮತ್ತು ಅಲಿ ಸಹಾಯಕ್ಕೆ ಬಂದಾಗ ಎಲ್ಲವೂ ಸುಲಭವಾಯಿತು. ಮಣ್ಣನ್ನು ಎಷ್ಟು ಪ್ರೀತಿಸುತ್ತೇವೆಯೋ ಅದಕ್ಕಿಂತ ಹೆಚ್ಚು ನಾವು ಮಣ್ಣಿನಿಂದ ಮರಳಿ ಪಡೆಯಬಹುದು ಎಂಬುದು ಈ ಸಹೋದರರ ಅಭಿಪ್ರಾಯ.

Join Whatsapp