ಅಧಿಕಾರಕ್ಕೇರಿದರೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂಪಾಯಿ: ಪ್ರಿಯಾಂಕ ಗಾಂಧಿ ಭರವಸೆ

Prasthutha|

ಲಕ್ನೋ:ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂಪಾಯಿ ಗೌರವಧನವನ್ನು ನೀಡುವುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಘೋಷಿಸಿದ್ದಾರೆ.

- Advertisement -

ಮಾತ್ರವಲ್ಲ ಮಾನ್ಯತೆ ಪಡೆದ ಆರೋಗ್ಯ (ಆಶಾ) ಕಾರ್ಯಕರ್ತರು ಮಾಡಿದ ಕೆಲಸ ಕಾರ್ಯವನ್ನು ಉತ್ತರ ಪ್ರದೇಶ ಸರ್ಕಾರ ಈ ಹಿಂದೆ ಅವಮಾನಿಸಿತ್ತು ಎಂದು ಅವರು ಬುಧವಾರ ಆರೋಪಿಸಿದ್ದಾರೆ.

ವಿವಿಧ ಬೇಡಿಕೆಗಳೊಂದಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಭೇಟಿಯಾಗಲು ಬಯಸಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಶಹಜಹಾನ್ ಪುರದಲ್ಲಿ ಪೊಲೀಸರು ನಡೆಸಿದ ದಾಳಿಯ ಉದ್ದೇಶಿತ ವೀಡಿಯೋವನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

- Advertisement -

ಉತ್ತರ ಪ್ರದೇಶ ಸರ್ಕಾರದಿಂದ ಆಶಾ ಕಾರ್ಯಕರ್ತೆಯರ ಮೇಲಿನ ಪ್ರತಿ ಹಲ್ಲೆಯು ಅವರ ಮಾಡಿದ ಕೆಲಸಕ್ಕೆ ಅವಮಾನವಾಗಿದೆ. ಆಶಾ ಕಾರ್ಯಕರ್ತೆಯರು ಕರೋನ ವೈರಸ್ ಸಮಯದಲ್ಲಿ ಮತ್ತು ಇತರ ಸಮಯದಲ್ಲಿ ತಮ್ಮ ಸೇವೆಯನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಗೌರವಧನ ನೀಡುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು ಗೌರವಕ್ಕೆ ಅರ್ಹರು ಮತ್ತು ಈ ಹೋರಾಟದಲ್ಲಿ ನಾನು ಸದಾ ಅವರೊಂದಿಗೆ ಇದ್ದೇನೆ ಎಂದು ಪ್ರಿಯಾಂಕ ತಿಳಿಸಿದರು.

ಮತ್ತೊಂದು ಟ್ವೀಟ್ ನಲ್ಲಿ ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ ಅವರು ಗೋಶಾಲೆಗಳ ಬಗ್ಗೆ ಕಳಪೆ ಪ್ರದರ್ಶನವನ್ನು ನೀಡುತ್ತಿದೆ ಮತ್ತು ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

Join Whatsapp