ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ನಟ ವಿಜಯ್​ ವಿರುದ್ಧ ಗಂಭೀರ ಆರೋಪ

Prasthutha|

ಚೆನ್ನೈ: ತಮಿಳು ಚಿತ್ರರಂಗದ​ ಜನಪ್ರಿಯ ನಟ​ ವಿಜಯ್​ ರಾಜಕೀಯಕ್ಕೆ ಪ್ರವೇಶ ಮಾಡಿರುವ ಬೆನ್ನಲ್ಲೇ ತಮಿಳು ಪ್ರಗತಿಪರ ಪಕ್ಷದ ಸಂಸ್ಥಾಪಕಿ ವೀರಲಕ್ಷ್ಮೀ ನಟನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ವಿಜಯ್​ ಅವರ ದೊಡ್ಡ ಅಭಿಮಾನಿಯಾಗಿದ್ದ ಹುಡುಗಿಯೊಬ್ಬಳು ಒಂದು ವರ್ಷದ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಳು.ಈ ವಿಚಾರವನ್ನು ಮನೆಗೆ ಹೇಳಲು ಭಯಗೊಂಡ ಹುಡುಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಳು. ದೇಹದ ಮೇಲೆ ಶೇ.60ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಹಣವಿಲ್ಲದ ಕಾರಣ ಹುಡುಗಿ ವಿಡಿಯೋ ಮೂಲಕ ವಿಜಯ್ ಬಳಿ ಸಹಾಯ ಕೋರಿದ್ದಳು. ಯಾರ ನೆರವು ಸಿಗದೇ, ಸಮರ್ಪಕ ಚಿಕಿತ್ಸೆಯೂ ದೊರೆಯದೇ ಹುಡುಗಿ ಮೃತಪಟ್ಟಳು ಎಂದು ವೀರಲಕ್ಷ್ಮೀ ನಟ ವಿಜಯ್ ವಿರುದ್ಧ ಆರೋಪ ಮಾಡಿದ್ದಾರೆ.

ತನ್ನ ಅಭಿಮಾನಿಗೂ ಸಹಾಯ ಮಾಡುವ ಮನಸ್ಸು ಇಲ್ಲದ ವಿಜಯ್, ರಾಜಕೀಯಕ್ಕೆ ಬಂದು ಜನರ ಉದ್ಧಾರ ಮಾಡುತ್ತಾರಾ ಎಂದು ವಿಜಯಲಕ್ಷ್ಮೀ ಪ್ರಶ್ನಿಸಿದ್ದಾರೆ. ಈ ಮೂಲಕ ವಿಜಯ್ ರಾಜಕೀಯ ಎಂಟ್ರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.




Join Whatsapp