U19 ಕ್ರಿಕೆಟ್ ವರ್ಲ್ಡ್ ಕಪ್: ಫೈನಲ್ ಪ್ರವೇಶಿಸಿದ ಭಾರತ

Prasthutha|

ಅಂಡರ್ 19 ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಫೈನಲ್ ಪ್ರವೇಶಿಸಿದೆ. ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎರಡು ವಿಕೆಟ್​ಗಳ ಗೆಲುವು ಸಾಧಿಸಿದೆ. ಭಾರತ ತಂಡದ ಪರ ಸಚಿನ್ ದಾಸ್ ಮತ್ತು ಉದಯ್ ಸಹರಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದಾರೆ.

- Advertisement -

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗಳನ್ನು ಕಳೆದುಕೊಂಡು 244 ರನ್ ಬಾರಿಸಿದರು. ತಂಡದ ಪರ ಲುಹಾನ್ ಡ್ರೆ ಪ್ರಿಟೋರಿಯಸ್ ಅವರು 3 ಸಿಕ್ಸರ್, 6 ಬೌಂಡಿಗಳೊಂದಿಗೆ 76 ರನ್​ಗಳನ್ನು ಬಾರಿಸಿದರು. ರಿಚರ್ಡ್ ಸೆಲೆಟ್ಸ್ವೇನ್ ಅವರು ಎರಡು ಸಿಕ್ಸ್, 4 ಬೌಂಡರಿಗಳೊಂದಿಗೆ 64 ಬಾರಿಸಿದು. ಆ ಮೂಲಕ ಈ ಇಬ್ಬರು ಆಟಗಾರರು ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

245 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡವು 8 ವಿಕೆಟ್​ಗಳನ್ನು ಕಳೆದುಕೊಂಡು 48.5 ಓವರ್​ಗೆ 248 ಬಾರಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಸಚಿನ್ ದಾಸ್ 1 ಸಿಕ್ಸ್ ಹಾಗೂ 11 ಬೌಂಡಿರಿಗಳನ್ನು ಸಿಡಿಸಿ 96 ರನ್​ಗಳನ್ನು ಕಲೆ ಹಾಕಿದರೆ, ಉದಯ್ ಸಹರಾನ ಅವರು 6 ಬೌಂಡರಿಗಳನ್ನು ಬಾರಿಸಿ 81 ರನ್​ಗಳನ್ನು ಕಲೆಹಾಕಿದರು. ಆ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

- Advertisement -

ಭಾರತದ ಪರ ರಾಜ್ ಲಿಂಬಾನಿ 3 ವಿಕೆಟ್, ಮುಶೀರ್ ಖಾನ್ 2 ವಿಕೆಟ್, ಸೌಮಿ ಕುಮಾರ್ ಪಾಂಡೆ, ನಮನ್ ತಿವಾರಿ ತಲಾ ಒಂದೊಂದು ವಿಕೆಟ್ ಪಡೆದರು. ಸೌತ್ ಆಫ್ರಿಕಾ ಪರ, ಟ್ರಿಸ್ಟಾನ್ ಲೂಸ್ ಮತ್ತು ಕ್ವೆನಾ ಮಫಕಾ ಅವರು ತಲಾ 3 ವಿಕೆಟ್ ಪಡೆದರು.

Join Whatsapp