ಈ ದುರಂತ ಭಾರತದ ಯಾವುದೇ ಮುಸ್ಲಿಮ್ ಕುಟುಂಬಕ್ಕೆ ಸಂಭವಿಸಬಹುದು: ಅಫ್ರೀನ್ ಫಾತಿಮಾ

Prasthutha|

ಇಂದು ನನ್ನ ಕುಟುಂಬ, ನಾಳೆ ನಿಮ್ಮದು, ಮಾನಸಿಕವಾಗಿ ಸಿದ್ಧರಾಗಿ ಎಂದ ಯುವ ಹೋರಾಟಗಾರ್ತಿ

- Advertisement -

ಲಖನೌ: ಅತ್ಯಂತ ಮೌಲ್ಯಯುತವಾದ ನಮ್ಮ ಮನೆಯನ್ನು ಧ್ವಂಸಗೊಳಿಸಲು ಜಿಲ್ಲಾಡಳಿತ ಆದೇಶ ನೀಡಿರುವುದು ಸಂಪೂರ್ಣ ಕಾನೂನುಬಾಹಿರ. ಅಕ್ರಮವಾಗಿ ಬಂಧಿಸಲ್ಪಟ್ಟಿರುವ ತನ್ನ ಕುಟುಂಬವನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ವಿದ್ಯಾರ್ಥಿ ಪರ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಪ್ರಯಾಗ್ ರಾಜ್ ನಲ್ಲಿ ಜಾವೇದ್ ಮುಹಮ್ಮದ್ ಕುಟುಂಬ ಸೇರಿದಂತೆ ಸುಮಾರು 68 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

‘ಇದು ಯಾವುದೇ ಮುಸ್ಲಿಂ ಕುಟುಂಬಕ್ಕೆ ಸಂಭವಿಸಬಹುದು’ ಎಂದು ಅಫ್ರೀನ್ ಹೇಳಿದ್ದಾರೆ.

ಈ ದುರಂತ ಭಾರತದ ಯಾವುದೇ ಮುಸ್ಲಿಮ್ ಕುಟುಂಬಕ್ಕೆ ಸಂಭವಿಸಿಬಹುದು. ಇಂದು ನನ್ನ ಕುಟುಂಬ, ನಾಳೆ ಇನ್ನೊಬ್ಬರ ಕುಟುಂಬ” ಎಂದು ಆಫ್ರೀನ್ ಎಚ್ಚರಿಸಿದ್ದಾರೆ.

ನೀವು ಮಾನಸಿಕವಾಗಿ ಸಿದ್ಧರಾಗಿದ್ದೀರಿ ಆದರೆ ಚಂಡಮಾರುತವು ಅಪ್ಪಳಿಸಿದಾಗ, ನೀವು ಏನೂ ಮಾಡಲು ಸಾಧ್ಯವಿಲ್ಲ ಎಂದು ನಿಮಗೆ ಅನಿಸುತ್ತದೆ” ಎಂದು ಅಫ್ರೀನ್ ಫಾತಿಮಾ ತಿಳಿಸಿದ್ದಾರೆ.

Join Whatsapp