ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಷ್ಟ್ರ ತೊರೆದ ಅಫ್ಘಾನ್ ಅಧ್ಯಕ್ಷ : ಸರ್ಕಾರ ರಚನೆಗೆ ಮುಂದಾದ ತಾಲಿಬಾನ್

Prasthutha|

ಕಾಬೂಲ್: ರಾಷ್ಟ್ರ ರಾಜಧಾನಿ ಕಾಬೂಲ್ ಅನ್ನು ಭಾನುವಾರ ಅಧಿಕೃತವಾಗಿ ತಾಲಿಬಾನ್ ಬಂಡುಕೋರರು ವಶಪಡಿಸಿದ ಹಿನ್ನೆಲೆಯಲ್ಲಿ ಅಫ್ಘಾನ್ ಅಧ್ಯಕ್ಷರಾದ ಅಶ್ರಫ್ ಘನಿ ಅವರು ರಾಷ್ಟ್ರ ತೊರೆದು ತಜಕಿಸ್ತಾನವನ್ನು ಸೇರಿದ್ದಾರೆಂದು ಅಫ್ಘಾನ್ ನ ಅರಮನೆ ಮೂಲಗಳು ಖಚಿತಪಡಿಸಿವೆ.

- Advertisement -

ಈ ಬೆಳವಣಿಯೊಂದಿಗೆ ಅಫ್ಘಾನ್ ಪಡೆ ಮತ್ತು ತಾಲಿಬಾನ್ ಬಂಡುಕೋರರ ನಡುವೆ ಬಹು ದಿನಗಳಿಂದ ನಡೆಯುತ್ತಿದ್ದ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಯುದ್ದಪೀಡಿತ ಅಫ್ಘಾನ್ ನ ಸಮಸ್ಯೆಗೆ ತಾರ್ತಿಕ ಅಂತ್ಯ ಕಾಣುವ ಲಕ್ಷಣ ಗೋಚರಿಸ ತೊಡಗಿದೆ.

ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ಬಂಡುಕೋರರು ವಿವಿಧ ದಿಕ್ಕುಗಳಿಂದ ಕಾಬೂಲ್ ಪ್ರವೇಶಿಸಿ ದೇಶವನ್ನು ವಶಕ್ಕೆ ಪಡೆದಿದೆ. ನಂತರ ನಡೆದ ಬೆಳವಣಿಗೆಯಲ್ಲಿ ಅಧ್ಯಕ್ಷ ಘನಿ ಮತ್ತು ಉನ್ನತ ನಾಯಕರು ಅಫ್ಘಾನ್ ತೊರೆದು ತಜಕಿಸ್ತಾನವನ್ನು ಸೇರಿದ್ದಾರೆಂದು ಮೂಲಗಳು ಸ್ಪಷ್ಟಪಡಿಸಿವೆ.  

Join Whatsapp