ಅಫ್ಘಾನ್ ಮಿಲಿಟರಿ ವಿಮಾನ ಉಝ್ಬೇಕಿಸ್ತಾನದಲ್ಲಿ ಪತನ

Prasthutha|

ತಾಷ್ಕೆಂಟ್: ಅಫ್ಘಾನಿಸ್ತಾನದ ಸೇನಾ ವಿಮಾನವು ಉಝ್ಬೇಕಿಸ್ತಾನದಲ್ಲಿ ಪತನಗೊಂಡಿದೆಯೆಂದು ರಕ್ಷಣಾ ಸಚಿವಾಲಯವು ಸೋಮವಾರ ಖಚಿತಪಡಿಸಿದೆ.

- Advertisement -

ಅಫ್ಘಾನ್ ಮೂಲದ ಮಿಲಿಟರಿ ವಿಮಾನವು ಕಾನೂನುಬಾಹಿರವಾಗಿ ಉಝ್ಬೇಕಿಸ್ತಾನದ ಗಡಿಯನ್ನು ದಾಟಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಝ್ಬೇಕಿಸ್ತಾನವು ತನಿಖೆ ನಡೆಸುತ್ತಿದೆಯೆಂದು ಸಚಿವಾಲಯದ ವಕ್ತಾದ ಬಖ್ರೋಮ್ ಜುಲ್ಫಿಕಾರೊವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಗಡಿ ರಾಷ್ಟ್ರವಾದ ಉಝ್ಬೇಕಿಸ್ತಾನದ ದಕ್ಷಿಣ ಪ್ರಾಂತ್ರದ ಉಝ್ಬೇಕಿಸ್ತಾನದ ದಕ್ಷಿಣ ಪ್ರಾಂತ್ಯದ ಸುರ್ಕೊಂಡಾರ್ಯೊದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಅಫಘಾತ ಪ್ರಕರಣವು ಮಾಧ್ಯಮಗಳ ವರದಿ ಆಧಾರದಲ್ಲಿ ದೃಡಪಟ್ಟಿದೆ.

Join Whatsapp