‘ಆದಿವಾಸಿಗಳು ಹಿಂದೂಗಳಲ್ಲ’ – ನಿರ್ಣಯ ಅಂಗೀಕರಿಸಿದ ಜಾರ್ಖಂಡ್ ಸರಕಾರ

Prasthutha|

ರಾಂಚಿ: ದಲಿತರು ಮತ್ತು ಆದಿವಾಸಿಗಳ ಹಿಂದೂಕರಣ ಮಾಡುವ ಬ್ರಾಹ್ಮಣವಾದಿಗಳಿಗೆ ಜಾರ್ಖಂಡ್ ರಾಜ್ಯ ಅಸೆಂಬ್ಲಿ ತೀವ್ರ ಹೊಡೆತವೊಂದನ್ನು ನೀಡಿದೆ. ಮತಗಳಿಗಾಗಿ ಆದಿವಾಸಿಗಳನ್ನು ಹಿಂದೂಗಳೆನ್ನಲು ಬ್ರಾಹ್ಮಣವಾದಿಗಳಿಗೆ ಯಾವುದೇ ಅಡ್ಡಿಯಿರಲಿಲ್ಲ. ಆದರೆ ಶೀಘ್ರದಲ್ಲೇ ಆದಿವಾಸಿಗಳು ಹೊಸ ಗುರುತನ್ನು ಪಡೆಯಲಿದ್ದಾರೆ. ತಾವು ಹಿಂದೂಗಳಲ್ಲವೆಂದು ಆದಿವಾಸಿಗಳು ಹೇಳಿಕೊಳ್ಳುತ್ತಿದ್ದರೂ ಈ ಬಾರಿ ಜಾರ್ಖಂಡ್ ಸರಕಾರ ಅಧಿಕೃತವಾಗಿ ಅದಕ್ಕೆ ಒಪ್ಪಿಗೆ ನೀಡಿದೆ. ಸ್ವತ: ಮುಖ್ಯಮಂತ್ರಿ ಹೇಮಂತ್ ಸೊರೇನ್ ಆದಿವಾಸಿಗಳಿಗೆ ಹೊಸ ಮತ್ತು ಹಿಂದೂಯೇತರ ಗುರುತನ್ನು ಪ್ರಕಟಿಸಿದ್ದಾರೆ.

ವಾಸ್ತವದಲ್ಲಿ ಜಾರ್ಖಂಡ್ ಶಾಸನ ಸಭೆಯು ಆದಿವಾಸಿ ಸಮಾಜಕ್ಕಾಗಿ ಹೊಸ ಧರ್ಮ ಅಥವಾ ಗುರುತನ್ನು ನೀಡಬೇಕೆಂದು ಆಗ್ರಹಿಸಿ ಪ್ರಸ್ತಾಪವಿಟ್ಟಿತ್ತು. 2020ರ ನವೆಂಬರ್ 11ರಮ್ದು ಹೇಮಂತ್ ಸೊರೇನ್ ಸರಕಾರ ವಿಶೇಷ ಅಧಿವೇಶನ ಕರೆದು ‘ಸರ್ಣ ಆದಿವಾಸಿ ಧರ್ಮ ಸಂಹಿತೆ’ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.

- Advertisement -

2021ರಲ್ಲಿ ನಡೆಯಲಿರುವ ಜನಗಣತಿಯಲ್ಲಿ ಧರ್ಮದ  ಕಾಲಮಿನಲ್ಲಿ ಆದಿವಾಸಿಗಳಿಗೆ ಪ್ರತ್ಯೇಕ ಧರ್ಮ ಸಂಹಿತೆಯನ್ನು ಬರೆಯುವ ಅವಕಾಶವನ್ನು ಒದಗಿಸಬೇಕೆಂದು ಈ ಪ್ರಸ್ತಾಪದ ಮುಖ್ಯ ಕೋರಿಕೆಯಾಗಿತ್ತು.

ವಿಶೇಷವೆಂದರೆ ಈ ಪ್ರಸ್ತಾಪವು ಸರ್ವಾನುಮತದಿಂದ ಅಂಗೀಕೃತಗೊಂಡಿದೆ. ಬಿಜೆಪಿ ಶಾಸಕರು ಕೂಡ ಈ ಪ್ರಸ್ತಾಪದ ಪರವಾಗಿ ಮತ ಚಲಾಯಿಸಿದ್ದರೆ. ಯಾಕೆಂದರೆ ಹೆಚ್ಚಿನ ಬಿಜೆಪಿ ಶಾಸಕರು ಕೂಡ ಆದಿವಾಸಿ ಸಮಾಜದಿಂದ ಬಂದವರಾಗಿದ್ದಾರೆ.

- Advertisement -