ಇಥಿಯೋಪಿಯನ್ ಏರ್ ಲೈನ್ಸ್ ನಿಂದ ಅಡ್ಡಿಸ್ ಅಬಾಬ ನಡುವೆ ಆರು ದಿನ ವಿಮಾನ ಸಂಚಾರ ವಿಸ್ತರಣೆ

Prasthutha|

ಬೆಂಗಳೂರಿನಿಂದ ಐದು ರಾಷ್ಟ್ರಗಳಿಗೆ ವಿಮಾನಸೇವೆ

- Advertisement -

ಬೆಂಗಳೂರು: ಇಥಿಯೋಪಿಯನ್ ಏರ್ ಲೈನ್ಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಬೆಂಗಳೂರಿನಿಂದ ಆಫ್ರಿಕಾ, ಅಮೆರಿಕ, ಕೆನಡಾ, ಐರೋಪ್ಯ ರಾಷ್ಟ್ರಗಳು ಒಳಗೊಂಡಂತೆ ಐದು ದೇಶಗಳ ನಡುವೆ ವಿಮಾನ ಸಂಚಾರ ನಡೆಸುತ್ತಿದೆ.

ಈ ಯಶಸ್ಸಿನ ಹಿನ್ನೆಲೆಯಲ್ಲಿ ಇಥಿಯೋಪಿಯನ್ ಏರ್ ಲೈನ್ಸ್ ನಗರದ ರಿನಸೆನ್ಸ್ ಹೋಟೆಲ್ ಸಭಾಂಗಣದಲ್ಲಿ ಪ್ರವಾಸಿ ಸಂಸ್ಥೆಗಳು ಹಾಗೂ ವ್ಯಾಪಾರಿ ಸಹಭಾಗಿತ್ವದ ಸಂಸ್ಥೆಗಳ ಸಮ್ಮೇಳನ ಆಯೋಜಿಸಿತ್ತು. ಆಫ್ರಿಕಾದ 20 ಮಂದಿ ಒಳಗೊಂಡಂತೆ ವಿವಿಧ ದೇಶಗಳಿಂದ ಸುಮಾರು 50 ಪ್ರತಿನಿಧಿಗಳು ಪಾಲ್ಗೊಂಡಿದ್ದರು.

- Advertisement -

ಬೆಂಗಳೂರಿನಿಂದ ಇಥಿಯೋಪಿಯಾದ ಅಡ್ಡಿಸ್ ಅಬಾಬ ನಡುವೆ ನಿರಂತರ ವಿಮಾನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು, ವಾರದಲ್ಲಿ ಮೂರು ದಿನ ಇದ್ದ ವಿಮಾನ ಸಂಚಾರ ಇದೀಗ ಆರು ದಿನಗಳಿಗೆ ವಿಸ್ತರಣೆಯಾಗಿದೆ.

ಸಮ್ಮೇಳನದಲ್ಲಿ ಮಾತನಾಡಿದ ಇಥಿಯೋಪಿಯನ್ ಎರ್ ಲೈನ್ಸ್ ಮಾರಾಟ ವ್ಯವಸ್ಥಾಪಕ ಅಡಿಸು ಎರಮಾಸ್, ಆಫ್ರಿಕಾ ದೇಶದ ಅತಿ ಡೊಡ್ಡ ವಿಮಾನಯಾನ ಸಂಸ್ಥೆ ಇಥಿಯೋಪಿಯನ್ ಏರ್ ಲೈನ್ 1946ರಲ್ಲಿ ಪ್ರಾರಂಭವಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಿಂದ 2019 ರಲ್ಲಿ ತನ್ನ ವಿಮಾನ ಹಾರಾಟ ಪ್ರಾರಂಭಿಸಿತು. ಇಥಿಯೋಪಿಯನ್ ದೇಶದ ಕಲೆ, ಸಂಸ್ಕೃತಿ ವಿಭಿನ್ನ ಹಾಗೂ ವೈಭವದಿಂದ ಕೂಡಿದೆ. ನೂರಾರು ಪ್ರವಾಸಿ ಕ್ಷೇತ್ರಗಳನ್ನು ನೋಡುವ, ಮನತಣಿಯುವ, ಸೌಂದರ್ಯದ ಗಣಿಯಾಗಿದೆ. ಬೆಂಗಳೂರಿನಿಂದ ಅತ್ಯಂತ ಕಡಿಮೆ ಪ್ರಯಾಣದರ ನಿಗದಿ ಮಾಡಲಾಗಿದೆ. ಪ್ರವಾಸ, ವ್ಯಾಪಾರ, ಹೂಡಿಕೆ ಮತ್ತು ಪ್ರವಾಸೋದ್ಯಮಕ್ಕೆ ಸೂಕ್ತ ಸ್ಥಳವಾಗಿದೆ ಎಂದರು.

ಇಥಿಯೋಪಿಯನ್ ಎರ್ ಲೈನ್ಸ್ ಪ್ರಾದೇಶಿಕ ವ್ಯವಸ್ಥಾಪಕರಾದ ರಿಜಿಟ್ಟು ಎಶಿತು ಮಾತನಾಡಿ, ಇಥಿಯೋಪಿಯನ್ ವಿಮಾನಯಾನ ಸಂಸ್ಥೆಗೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ವಾಯು ಮಾರ್ಗ ಸಂಪರ್ಕ ವಲಯದಲ್ಲಿ ಮಹತ್ವದ ಸಾಧನೆ ಮಾಡಿದ್ದು, ಇದರಿಂದ ಬೆಂಗಳೂರು ಹಾಗೂ ಇಥಿಯೋಪಿಯ ರಾಷ್ಟ್ರಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇಥಿಯೋಪಿಯನ್ ಎರ್ ಮಾರಾಟ ವ್ಯವಸ್ಥಾಪಕರಾದ ಸಂದೀಪ್ ಕುಮಾರ್ ಮೀನ, ಪ್ರಾದೇಶಿಕ ಆಯುಕ್ತರಾದ ಶ್ರೀನಿವಾಸನ್ ಜಯಶೀಲನ್, ನಿರ್ದೇಶಕಿ,ಸಿ.ಇ.ಓ ಇಶಾ ಗೋಯಲ್ ಮತ್ತಿತರರು ಪಾಲ್ಗೊಂಡಿದ್ದರು.

Join Whatsapp