ಗುಜರಾತ್ ಗಲಭೆ: ತೀಸ್ತಾ,ಶ್ರೀಕುಮಾರ್, ಸಂಜೀವ್ ಭಟ್ ಮೇಲೆ ಚಾರ್ಜ್ ಶೀಟ್

Prasthutha|

ಅಹಮದಾಬಾದ್: ಗುಜರಾತ್ ವಿಶೇಷ ತನಿಖಾ ದಳವು ಮುಂಬೈ ಮೂಲದ ಸಾಮಾಜಿಕ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್, ನಿವೃತ್ತ ಡಿಜಿಪಿ ಆರ್. ಬಿ. ಶ್ರೀಕುಮಾರ್, ಹಾಗೂ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಇವರ ವಿರುದ್ಧ 2002ರ ಗುಜರಾತ್ ಗಲಭೆಯ ಸಾಕ್ಷ್ಯನಾಶವೆಸಗಿದ ಆರೋಪದ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದೆ.

- Advertisement -

ಎಸ್ಐಟಿ ಹಾಗೂ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥರಾದ ಡಿಐಜಿ ದೀಪನ್ ಭಂಡಾರ್ ಅವರು ಬುಧವಾರ ಈ ಮೂವರ ಮೇಲೆ ಚಾರ್ಜ್ ಶೀಟ್ ಸಲ್ಲಿಸಿರುವುದರ ಬಗ್ಗೆ ಮಾಹಿತಿ ನೀಡಿದರು.

ತೀಸ್ತಾ ಅವರು ಸೆಪ್ಟೆಂಬರ್ 2ರಂದು ಜಾಮೀನಿನ ಮುಖಾಂತರ ಹೊರಬಂದಿದ್ದರು. ಶ್ರೀಕುಮಾರ್ ಜೂನ್ 25ರಿಂದ ಸೆರೆಯಲ್ಲಿದ್ದು ಸೆಪ್ಟೆಂಬರ್ 28ಕ್ಕೆ ಗುಜರಾತ್ ಹೈಕೋರ್ಟ್ ನಲ್ಲಿ ನಡೆಯಲಿರುವ ಜಾಮೀನು ವಿಚಾರಣೆಯ ತೀರ್ಪಿಗೆ ಕಾಯುತ್ತಿದ್ದಾರೆ. ಭಟ್ ಅವರು 1990ರಲ್ಲಿ ನಡೆದ ಲಾಕಪ್ ಡೆತ್ ಪ್ರಕರಣದ ಆರೋಪಿಯಾಗಿದ್ದು ಪಾಲಂಪುರ್ ಜೈಲಿನಲ್ಲಿದ್ದಾರೆ.

Join Whatsapp