ಮುಂಬೈ: ಹಿಂಡೆನ್’ಬರ್ಗ್ ವರದಿಯ ಹಿನ್ನೆಲೆಯಲ್ಲಿ ಅದಾನಿ ಹಣ ಮಾಡಿದ ಬಗೆಯನ್ನು ಅಮೂಲಾಗ್ರವಾಗಿ ತನಿಖೆ ಮಾಡಬೇಕು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಒತ್ತಾಯಿಸಿದ್ದಾರೆ.
ಹಿಂಡೆನ್’ಬರ್ಗ್ ಹೇಗಾದರೂ ಇರಲಿ, ಅದರ ರಾಜಕೀಯ ಏನಾದರೂ ಇರಲಿ, ಇಲ್ಲಿ ಮಧ್ಯಮ ವರ್ಗದವರ ಹಣದಿಂದ ಅದಾನಿ ಗಂಟು ಕಟ್ಟಿಕೊಂಡುದರ ಬಗ್ಗೆ ತನಿಖೆ ನಡೆಯಲೇಬೇಕು ಎಂದು ಸಾಳ್ವೆ ಹೇಳಿದರು.
ಮಧ್ಯಮ ವರ್ಗದವರು ಷೇರು ಇತ್ಯಾದಿಯಲ್ಲಿ ಇಟ್ಟ ಹಣದಿಂದ ಟನ್’ಗಟ್ಟಲೆ ಲೂಟಿಯಾಗಿದೆ ಎನ್ನುವುದರ ಬಗ್ಗೆ ತಜ್ಞರ ಸಮಿತಿಯೊಂದರಿಂದ ಸಮಗ್ರ ತನಿಖೆ ಆಗಲೇಬೇಕು ತಾನೆ? ಎಂದು ಅವರು ಪ್ರಶ್ನಿಸಿದರು.
“ಮಾರುಕಟ್ಟೆಯಲ್ಲಿ ಇತರರನ್ನು ಮುಳುಗಿಸಿ ತಾನು ಮೇಲ್ಮೈ ಪಡೆಯುವ ಈ ಷೇರು ಅವ್ಯವಹಾರದ ವಿಷಯ ಮೊದಲು ಸೆಬಿಗೆ ತಿಳಿಯಬೇಕು ತಾನೆ? ಇದು ಅತಿ ದೊಡ್ಡ ವಂಚನೆ ಆಗಿದ್ದು, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಇಲಾಖೆ ಏನು ಮಾಡುತ್ತಿದೆ” ಎಂದು ಸಾಳ್ವೆ ಪ್ರಶ್ನಿಸಿದರು.
ಈಗ ಹಿಂಡೆನ್’ಬರ್ಗ್ ವಿರುದ್ಧ ಟೀಕೆ ಮಾಡುವ, ಆಳುವವರು ಬಾಯಿ ಬಿಡದ ಸ್ಥಿತಿ ಏಕೆ? ಇದರ ಹಿಂದಿನ ಮೋಸ ಹೊರಗೆ ಬರಲೇ ಬೇಕು ಎಂದು ಅವರು ಹೇಳಿದರು.
ಷೇರನ್ನು ಬಳಸಿಕೊಂಡು ಆಗಿದೆ. ಅವರನ್ನು ಮುಳುಗಿಸಿ ಆಗಿದೆ. ಕೋಟಿ ಕೋಟಿ ಸೇರಿಸಿಕೊಂಡು ಆಗಿದೆ. ಪಂಗನಾಮ ಹಾಕಿಸಿಕೊಂಡ ಜನರಿಗೆ ಅದರ ಅರಿವು ಇಲ್ಲ. ಹಿಂಡೆನ್ ಬರ್ಗ್ – ಅದಾನಿ ವಿಷಯದಲ್ಲಿ ಭಾರೀ ದರೋಡೆ ಇದ್ದು, ಇದನ್ನು ತಜ್ಞರು ಮಾತ್ರ ಜನರಿಗೆ ವಿವರಿಸುವುದು ಸಾಧ್ಯ ಎಂದೂ ಸಾಳ್ವೆ ತಿಳಿಸಿದರು.
ಪ್ರಧಾನಿ ಮತ್ತು ಬಿಜೆಪಿ ಸರಕಾರವು ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಲು ಹೆದರುತ್ತಿರುವುದೇಕೆ? ಅದಾನಿಯನ್ನು ಏರಿಸಲು ಶೇರು ಬೆಲೆ ಏರಿದರೆ, ಅದಾನಿಯನ್ನು ಮುಳುಗಿಸಲು ಶೇರು ಬೆಲೆ ಇಳಿಸಿರುವುದು ಸ್ಪಷ್ಟ ಎಂದೂ ಅದಾನಿ ತಿಳಿಸಿದರು.
ಮಾಜಿ ಸುಪ್ರೀಂ ಕೋರ್ಟ್ ಜಡ್ಜ್ ಎ. ಎಂ. ಸಪ್ರೆ, ಮಾಜಿ ಎಸ್’ಬಿಐ ಚೇರ್ಮನ್ ಒ. ಪಿ. ಭಟ್, ನಿವೃತ್ತ ಬಾಂಬೆ ಹೈಕೊರ್ಟ್ ಜಡ್ಜ್ ಜೆ. ಪಿ. ದೇವಧರ್, ಮಾಜಿ ಇನ್ಫೋಸಿಸ್ ಚೇರ್ಮನ್ ಕೆ. ವಿ. ಕಾಮತ್, ಇನ್ಫೋಸಿಸ್ ಸಹ ಸ್ಥಾಪಕ ನಂದನ್ ನಿಲೇಕಣಿ, ವಕೀಲ ಸೋಮಶೇಖರನ್ ಸುಂದರೇಶನ್ ಈ ಆರು ಜನರು ಸಮಿತಿ ಈಗ ಜನರ ಆಶಯದಂತೆ ಕೆಲಸ ಮಾಡಬೇಕಾಗಿದೆ ಎಂದೂ ಅವರು ಹೇಳಿದರು.
ಅದಾನಿ ಅವ್ಯವಹಾರ ಬಗ್ಗೆ ಸಮಗ್ರ ತನಿಖೆ ಅಗತ್ಯ: ಹರೀಶ್ ಸಾಳ್ವೆ
Prasthutha|