ಹಾಸನದ ರಾಜಕಾರಣವನ್ನು ರೇವಣ್ಣಗೇ ಬಿಟ್ಟಿದ್ದೇನೆ: ಕುಮಾರಸ್ವಾಮಿ

Prasthutha|

ಬೆಂಗಳೂರು: ಹಾಸನದ ರಾಜಕಾರಣವನ್ನು ರೇವಣ್ಣ ಅವರಿಗೇ ಬಿಟ್ಟಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

- Advertisement -


ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಡೂರು ಕ್ಷೇತ್ರದ ಕಾಂಗ್ರೆಸ್ ಪ್ರಮುಖ ಸಿ.ಎಂ. ಧನಂಜಯ ಹಾಗೂ ಕೊಳ್ಳೇಗಾಲ ಕ್ಷೇತ್ರ ನಿವೃತ್ತ ಸರ್ಕಲ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಪಕ್ಷಕ್ಕೆ ದುಡಿದವರನ್ನು ಎಂದೂ ಕೈಬಿಟ್ಟಿಲ್ಲ. ತಾಳ್ಮೆ ಎನ್ನುವುದು ಇಲ್ಲಿ ಮುಖ್ಯ ಎಂದು ಹೇಳಿದರು.


ಜೆಡಿಎಸ್ ನ ಎರಡನೇ ಪಟ್ಟಿ ಅಂತಿಮ ಹಂತದಲ್ಲಿದ್ದು, 60 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಇದೇ ತಿಂಗಳ 11 ಅಥವಾ 14ರಂದು ಪ್ರಕಟಿಸಲಾಗುವುದು ಎಂದರು.

Join Whatsapp