NDTV ಶೇರು ಖರೀದಿಸಿದ ಅದಾನಿ ಸಮೂಹ ಸಂಸ್ಥೆ

Prasthutha|

ನವದೆಹಲಿ: ಉದ್ಯಮಿ ಗೌತಮ್ ಅದಾನಿಯ ಮಾಧ್ಯಮ ಘಟಕವಾದ AMG ಮೀಡಿಯಾ ನೆಟ್‌ ವರ್ಕ್‌ಗಳು NDTV (ನ್ಯೂಡೆಲ್ಲಿ ಟೆಲಿವಿಷನ್ ಲಿಮಿಟೆಡ್) ಷೇರ್‌ ಅನ್ನು ಖರೀದಿಸಿದೆ.

- Advertisement -

ಅದಾನಿ ಸಮೂಹದ ಮಾಧ್ಯಮ ಪ್ರಕಟಣೆಯು ಮಾಧ್ಯಮ ಗುಂಪಿನಲ್ಲಿ 29.18% ಪಾಲನ್ನು ಖರೀದಿಸಿದೆ ಎಂದು ಬಹಿರಂಗಪಡಿಸಿದೆ. ಷೇರು ಸ್ವಾಧೀನದ ಬಗ್ಗೆ ಮಾಹಿತಿ ನೀಡಿದ ಅದಾನಿ ಎಂಟರ್‌ ಪ್ರೈಸಸ್‌ ನ ಸಿಇಒ ಮತ್ತು ಮೀಡಿಯಾ ಇನಿಶಿಯೇಟಿವ್ಸ್‌ನ ಮುಖ್ಯ ಸಂಪಾದಕ ಸಂಜಯ್ ಪುಗಾಲಿಯಾ, “ಈ ಸ್ವಾಧೀನವು ಹೊಸ ಯುಗದ ಮಾಧ್ಯಮದ ಹಾದಿಯನ್ನು ಸುಗಮಗೊಳಿಸುವ AMNL ನ ಗುರಿಯ ಪ್ರಯಾಣದ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಸುದ್ದಿ ವಿತರಣೆಯಲ್ಲಿ ಎನ್‌ಡಿಟಿವಿ ನಾಯಕತ್ವವನ್ನು ಬಲಪಡಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದರು.

RRPR ಎನ್‌ ಡಿಟಿವಿಯ ಪ್ರವರ್ತಕ ಸಮೂಹ ಕಂಪನಿಯಾಗಿದೆ ಮತ್ತು ಎನ್‌ಡಿಟಿವಿಯಲ್ಲಿ 29.18% ಪಾಲನ್ನು ಹೊಂದಿದೆ ಎಂದು ಅದಾನಿ ಗ್ರೂಪ್‌ನ ಪ್ರಕಟನೆ ತಿಳಿಸಿದೆ.

- Advertisement -

ಎನ್‌ಡಿಟಿವಿಯು ದೇಶದ ಮುಂಚೂಣಿ ಮಾಧ್ಯಮ ಸಂಸ್ಥೆಯಾಗಿದ್ದು, ಮೂರು ದಶಕಗಳಿಂದ ನಂಬಲರ್ಹ ಸುದ್ದಿಗಳನ್ನು ವಿತರಿಸುತ್ತಿದೆ. ಕಂಪನಿಯು NDTV 24×7, NDTV India ಮತ್ತು NDTV Profit ಎಂಬ ಮೂರು ರಾಷ್ಟ್ರೀಯ ಸುದ್ದಿ ವಾಹಿನಿಗಳನ್ನು ನಿರ್ವಹಿಸುತ್ತದೆ.



Join Whatsapp