ಫಹದ್ ಅಹ್ಮದ್’ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಸ್ವರಾ ಭಾಸ್ಕರ್

Prasthutha|

ಮುಂಬೈ: ಹೋರಾಟಗಾರ್ತಿ ಹಾಗೂ ಪ್ರಗತಿಪರ ವಿಚಾರಧಾರೆಯ ಬಾಲಿವುಡ್’ನ ಖ್ಯಾತ ನಟಿ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಪಕ್ಷದ ಯುವ ಮುಖಂಡ ಫಹದ್ ಅಹ್ಮದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ವಿಷಯವನ್ನು ಸ್ವರಾ ಅವರು  ಟ್ವಿಟರ್‌  ಹಾಗೂ ಇನ್​’ಸ್ಟಾಗ್ರಾಮ್’​ನಲ್ಲಿ  ಪ್ರಕಟಿಸಿದ್ದಾರೆ.

- Advertisement -

ಜನವರಿ 6ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಫಹಾದ್ ಅವರು ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ. ನಟಿ ಟ್ವಿಟರ್‌’ನಲ್ಲಿ ತಮ್ಮ ಸುಂದರವಾದ ಪ್ರೇಮಕಥೆಯನ್ನು ವಿವರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

  “ಕೆಲವೊಮ್ಮೆ ನೀವು ನಿಮ್ಮ ಪಕ್ಕದಲ್ಲಿಯೇ ಇರುವ ಯಾವುದನ್ನಾದರೂ ಮತ್ತೆಲ್ಲೋ ಹುಡುಕುತ್ತೀರಿ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು, ನಾವು ಮೊದಲು ಸ್ನೇಹದ ಅಗಾದತೆಯನ್ನು ಕಂಡುಕೊಂಡೆವು. ತದನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡೆವು! ನನ್ನ ಹೃದಯಕ್ಕೆ ಸ್ವಾಗತ @FahadZirarAhmad ಮನಸ್ಸು ಅಸ್ತವ್ಯಸ್ತವಾಗಿದೆ, ಆದರೂ ಅದು ಅದು ನಿನ್ನದು!” ಎಂದು ಸ್ವರಾ ಬರೆದುಕೊಂಡಿದ್ದಾರೆ.

- Advertisement -