ಎರಡು ಬಾರಿ ರಾಜ್ಯಸಭಾ ಸ್ಥಾನದ ಆಫರ್ ಬಂದಿತ್ತು: ಬಾಲಿವುಡ್ ನಟ ಸೋನು ಸೂದ್

Prasthutha|

ಮುಂಬೈ: ಎರಡು ಪಕ್ಷಗಳಿಂದ ಬಂದ ರಾಜ್ಯಸಭಾ ಸ್ಥಾನದ ಆಫರ್ ಗಳನ್ನು ತಿರಸ್ಕರಿಸಿ ರಾಜಕೀಯದಿಂದ ದೂರವುಳಿದಿದ್ದೇನೆ ಎಂದು ಬಾಲಿವುಡ್ ನಟ ಸೋನು ಸೂದ್ ಇಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

ಇತ್ತೀಚೆಗೆ ಸೋನು ಸೂದ್ ಅವರ ಮುಂಬೈ ನಿವಾಸ ಮತ್ತು ಕಚೇರಿಗಳಲ್ಲಿ ಐಟಿ ದಾಳಿ ನಡೆಸಿ ತೆರಿಗೆ ವಂಚನೆ ಮತ್ತು ಅಕ್ರಮ ಸಂಪತ್ತು ಪ್ರಕರಣದ ಆರೋಪವನ್ನು ನಿರಾಕರಿಸಿ ಇದೇ ಮೊದಲ ಬಾರಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಸಕ್ತ ಐಟಿ ಅಧಿಕಾರಿಗಳಿಗೆ ಬಹುತೇಕ ಎಲ್ಲಾ ದಾಖಲೆ, ವಿವರಗಳನ್ನು ನೀಡಿದ್ದೇನೆ. ಅವರ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ. ಭಾರತದ ಕಾನೂನಿಗೆ ಗೌರವ ನೀಡಿ ತನಿಖೆಗೆ ಸಹಕರಿಸಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದರು.

- Advertisement -

ಅಕ್ರಮ ವಿದೇಶಿ ಧನಸಹಾಯ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ, ನನ್ನ ಖಾತೆಗೆ ಸಂದಾಯವಾದ ಒಂದು ಡಾಲರ್ ಕೂಡ ದುರುಪಯೋಗ ಆಗಿರುವುದಿಲ್ಲ.ವಿದೇಶದಿಂದ ಸಂದಾಯವಾದ ಎಲ್ಲಾ ನಗದನ್ನು ಫಲಾನುಭವಿಗಳಿಗೆ ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.

ದೆಹಲಿ ಸರ್ಕಾರದ ವತಿಯಿಂದ ನಡೆಯುತ್ತಿರುವ ಶಾಲಾ ಶಿಕ್ಷಣದ ಮಾರ್ಗದರ್ಶನ ಕಾರ್ಯಕ್ರಮದ ರಾಯಭಾರಿ ಆಗಿ ಆಯ್ಕೆಯಾದ ಸೋನು ಸೂದ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರರೊಂದಿಗೆ ಗುರುತಿಸಿದ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.



Join Whatsapp