ಕೇವಲ ಜಾಹೀರಾತಿಗೆ ಯೋಗಿ ಸರ್ಕಾರ ಈ ವರ್ಷ ಮೀಸಲಿಟ್ಟ ಕೋಟಿಗಳೆಷ್ಟು ಗೊತ್ತೇ?

Prasthutha|

ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಕೇವಲ ಜಾಹೀರಾತಿಗಾಗಿ ಈ ವರ್ಷ ಬರೋಬ್ಬರಿ 500 ಕೋಟಿ ರೂ. ಮೀಸಲಿರಿಸಿದೆ.

- Advertisement -

ಇದು ಮುದ್ರಣ, ಟಿವಿ, ಬೋರ್ಡ್‌ಗಳು, ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳಿಗಾಗಿ ಮೀಸಲಾಗಿರುವ ಹಣದ ಮೊತ್ತವಾಗಿದೆ. ಇದು ಯೋಗಿ ಸರ್ಕಾರದ ಒಟ್ಟು ಆದಾಯದ ಒಂದು ಸಣ್ಣ ಮೊತ್ತವಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿದ್ದಾರೆ.

ಉತ್ತರಪ್ರದೇಶ ಸರ್ಕಾರದ ವಾರ್ಷಿಕ ಬಜೆಟ್ 5,50,000 ಕೋಟಿ ರೂ. ದೆಹಲಿ ಸರ್ಕಾರ ಏಳು ವರ್ಷಗಳಲ್ಲಿ ಜಾಹೀರಾತಿಗಾಗಿ ಒಟ್ಟು 997 ಕೋಟಿ ರೂ. ಖರ್ಚು ಮಾಡಿದ್ದು, ಉತ್ತರಪ್ರದೇಶ ಸರ್ಕಾರ ಕೇವಲ ಒಂದು ವರ್ಷದಲ್ಲಿ ಅದರ ಅರ್ಧದಷ್ಟು ಖರ್ಚು ಮಾಡಿದೆ. ಯೋಗಿ ಸರ್ಕಾರವನ್ನು ಮಾಧ್ಯಮಗಳಲ್ಲಿ ಟೀಕಿಸದಿರಲು ಇದೂ ಒಂದು ಕಾರಣ ಎನ್ನಲಾಗಿದೆ.

- Advertisement -

ಉತ್ತರಪ್ರದೇಶದ ಪತ್ರಕರ್ತ ಉಮಾಶಂಕರ್ ದುಬೆ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಪ್ರತ್ಯುತ್ತರವಾಗಿ 2020 ಏಪ್ರಿಲ್ ನಿಂದ 2021 ಮಾರ್ಚ್ ವರೆಗೆ ಟಿವಿ ಚಾನೆಲ್‌ಗಳಿಗೆ 160.31 ಕೋಟಿ ರೂ. ನೀಡಿರುವುದಾಗಿ ಎಂದು ತಿಳಿಸಲಾಗಿದೆ.  ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ 88.68 ಕೋಟಿ ರೂ. ಮತ್ತು ಸ್ಥಳೀಯ ಚಾನೆಲ್‌ಗಳಿಗೆ 71.63 ಕೋಟಿ ರೂ. ನೀಡಲಾಗಿದೆ.

ನೆಟ್ವರ್ಕ್18 ಗ್ರೂಪ್ ಗೆ 28.82 ಕೋಟಿ ರೂ.,ಝೀ ಮೀಡಿಯಾಗೆ 23.48 ಕೋಟಿ ರೂ., ಎಬಿಪಿ ಗ್ರೂಪ್ ಗೆ 18.19 ಕೋಟಿ ರೂ., ಇಂಡಿಯಾ ಟುಡೇಗೆ 10.64 ಕೋಟಿ ರೂ. ನೀಡಲಾಗಿದೆ.

ಯೋಗಿ ಸರ್ಕಾರದ ಜಾಹೀರಾತು ವೆಚ್ಚಗಳು ಹಿಂದಿನ ಸರ್ಕಾರಗಳಿಗಿಂತ ಶೇ.50 ರಷ್ಟು ಅಧಿಕವಾಗಿದೆ.



Join Whatsapp