ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದ ನಟ ಸಿದ್ಧಾರ್ಥ್ ಗೆ ಕೊಲೆ ಬೆದರಿಕೆ

Prasthutha|

►’ನಿಮ್ಮ ದಾಳಿ ಮುಂದುವರೆಸಿ, ನನ್ನನ್ನು ಮೌನವಾಗಿಸಲು ಸಾಧ್ಯವಿಲ್ಲ’

- Advertisement -

ಚೆನ್ನೈ :  “ನನ್ನ ಫೋನ್ ಸಂಖ್ಯೆ ಸೋರಿಕೆಯಾಗಿದೆ.  ಈ ಕಾರಣದಿಂದಾಗಿ, ನನಗೆ ಮತ್ತು ನನ್ನ ಕುಟುಂಬಕ್ಕೆ ‘ನಿಂದನೆ, ಅತ್ಯಾಚಾರ ಮತ್ತು ಕೊಲೆ ಬೆದರಿಕೆಯ ಕರೆಗಳು ಬರುತ್ತಲೇ ಇದೆ” ಎಂದು ತಮಿಳು ನಟ ಸಿದ್ಧಾರ್ಥ್ ಅವರು ಟ್ವೀಟ್ ಮಾಡಿದ್ದು, ನನ್ನ ನಂಬರ್‌ ಸಾರ್ವಜನಿಕವಾಗಿ ಲೀಕ್‌ ಆಗಲು ತಮಿಳುನಾಡಿನ ಬಿಜೆಪಿಯ ಐಟಿ ಸೆಲ್‌ ಕಾರಣ ಎಂದು ಆರೋಪಿಸಿದ್ದಾರೆ.

https://twitter.com/Actor_Siddharth/status/1387653507814072325

“ನಾನು ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಿದ್ದೇನೆ. ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸುವೆ” ಎಂದು ತನ್ನ ಟ್ವಿಟರ್ ಪೋಸ್ಟ್ನಲ್ಲಿ, ಸಿದ್ಧಾರ್ಥ್ ಅವರು ಉಲ್ಲೇಖಿಸಿದ್ದಾರೆ., ‘ನನ್ನ ಫೋನ್ ಸಂಖ್ಯೆಯನ್ನು ತಮಿಳುನಾಡು ಬಿಜೆಪಿ ಮತ್ತು ಬಿಜೆಪಿ ಐಟಿ ಸೆಲ್ ಸದಸ್ಯರು ಸೋರಿಕೆ ಮಾಡಿದ್ದಾರೆ. ನನಗೆ ಮತ್ತು ಕುಟುಂಬಕ್ಕೆ 24 ಗಂಟೆಗಳಿಗಿಂತ ಹೆಚ್ಚು ಕಾಲ 500 ಕ್ಕೂ ಹೆಚ್ಚು ಕರೆಗಳು, ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬಂದಿದ್ದು. ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಿದ್ದೇನೆ. ನಿಮ್ಮ ದಾಳಿ ಮುಂದುವರೆಸಿ, ನನ್ನನ್ನು ಮೌನವಾಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

- Advertisement -
https://twitter.com/Actor_Siddharth/status/1387657671826837505

ಇತ್ತೀಚಿನ ದಿನಗಳಲ್ಲಿ, ಕೋವಿಡ್ ನಿರ್ವಹಣೆಯಲ್ಲಿ ವಿಫಲವಾದ ಆಡಳಿತಾರೂಢ ಬಿಜೆಪಿ ಪಕ್ಷವನ್ನು ನಟ ಸಿದ್ದಾರ್ಥ್ ಟೀಕಿಸುತ್ತಿದ್ದರು.

Join Whatsapp