ಬೆಂಗಳೂರು: ಖಾಸಗಿ ಸುದ್ದಿವಾಹಿನಿಯೊಂದು ಕಾಂತಾರಾ ನಿರ್ದೇಶಕ ರಿಷಬ್ ಶೆಟ್ಟಿಯವರ ಸಂದರ್ಶನ ನಡೆಸುತ್ತಿದ್ದ ಸಂದರ್ಭ, ಸಂದರ್ಶಕಿಯೊಬ್ಬರು ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ “ನೊ ಕಮೆಂಟ್” ಎಂದು ಹೇಳಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಖಾಸಗಿ ಸುದ್ದಿವಾಹಿನಿಯ ನಿರೂಪಕಿ ರಿಷಬ್ ಶೆಟ್ಟಿಯೊಂದಿಗೆ ಚುಟುಕು ಪ್ರಶ್ನೆ ಕೇಳುವ ಸಂದರ್ಭದಲ್ಲಿ ರಿಷಬ್ ಶೆಟ್ಟಿ ನರೇಂದ್ರ ಮೋದಿಯವರನ್ನು ಹೊಗಳಿ ರಾಹುಲ್ ಗಾಂಧಿ ಕುರಿತು ʼನೊ ಕಮೆಂಟ್ಸ್ʼ ಎಂದು ಹೇಳಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಕೆಲವರು ಕೊನೆಗೂ ರಿಷಬ್ ಶೆಟ್ಟಿ ಸಂಘಪರಿವಾರದ ಬುದ್ಧಿ ತೋರಿಸಿಯೇ ಬಿಟ್ಟರು ಎಂದು ಟೀಕಿಸಿದ್ದಾರೆ.