ನಟ ದಿಗಂತ್ ಆರೋಗ್ಯದಲ್ಲಿ ಚೇತರಿಕೆ : ಹೆಲ್ತ್ ಸ್ಟೇಟಸ್ ರಿಲೀಸ್ ಮಾಡಿದ ಮಣಿಪಾಲ್ ಹಾಸ್ಪಿಟಲ್

Prasthutha|

ಬೆಂಗಳೂರು: ಗೋವಾ ಪ್ರವಾಸದಲ್ಲಿದ್ದಾಗ ಗಾಯಗೊಂಡಿದ್ದ ನಟ ದಿಗಂತ್ ಬೆಂಗಳೂರಿಗೆ ಕರೆ ತಂದು ಹಳೆ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿಲಾಗಿತ್ತು. ಇದೀಗ ಅವರು ಆರೋಗ್ಯವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂಬುದಾಗಿ ಮಣಿಪಾಲ್ ಆಸ್ಪತ್ರೆಯು ತಿಳಿಸಿದೆ

- Advertisement -

ನಟ ದಿಗಂತ್ ಅವರ ಹೆಲ್ತ್ ಸ್ಟೇಟಸ್ ರಿವೀಲ್ ಮಾಡಿದ ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿಯು, ವೈದ್ಯಕೀಯ ಸಿಬ್ಬಂದಿಗಳು ಅವರು ಶೀಘ್ರವೇ ಗುಣಮುಖರಾಗಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಅವರ ಆರೋಗ್ಯದ ಕುರಿತಾದ ಮತ್ತಷ್ಟು ಮಾಹಿತಿಯನ್ನು ಮತ್ತೆ ಬಿಡುಗಡೆ ಮಾಡೋದಾಗಿ ತಿಳಿಸಿದೆ.

ಗೋವಾದಿಂದ ಹೆಚ್ಚಿನ ಚಿಕಿತ್ಸೆಗಾಗಿ ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ನಟಿ ಐಂದ್ರಿತಾ ರೈ ಕರೆತಂದಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ಅವರ ಕುತ್ತಿಗೆ ಭಾಗದ ಗಾಯಕ್ಕೆ ಸರ್ಜರಿಯನ್ನು ಸ್ಟೈನ್ ಸರ್ಜನ್ ಡಾ.ವಿದ್ಯಾಧರ ಮತ್ತು ತಂಡ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

Join Whatsapp