ಚೀನೀ ಅಪ್ಲಿಕೇಶನ್ ಗಳ ವಿರುದ್ಧ ಕ್ರಮ ಕೈಗೊಂಡ ಕೇಂದ್ರ ಸರ್ಕಾರ; 138 ಬೆಟ್ಟಿಂಗ್ ಆ್ಯಪ್ ಗಳು, 94 ಲೋನ್ ಆ್ಯಪ್ ಗಳ ನಿಷೇಧ

Prasthutha|

ನವದೆಹಲಿ: ಕೇಂದ್ರ ಸರ್ಕಾರವು ಚೀನೀ ಅಪ್ಲಿಕೇಶನ್ ಗಳ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಿದೆ. 138 ಬೆಟ್ಟಿಂಗ್ ಅಪ್ಲಿಕೇಶನ್ ಗಳು ಮತ್ತು 94 ಲೋನ್ ಅಪ್ಲಿಕೇಶನ್ ಗಳನ್ನು ನಿಷೇಧಿಸಲಾಗಿದೆ. ಅಪ್ಲಿಕೇಶನ್ ಗಳ ಮೂಲಕ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ಸರ್ಕಾರದ ತಿಳಿಸಿದೆ.

- Advertisement -

ಆರು ತಿಂಗಳ ಹಿಂದೆ 288 ಚೀನೀ ಅಪ್ಲಿಕೇಶನ್ ಗಳನ್ನು ವಿಶ್ಲೇಷಿಸಲು ಪ್ರಾರಂಭಿಸಿದ ಸರ್ಕಾರವು ಈ ಅಪ್ಲಿಕೇಶನ್ ಗಳಿಗೆ ಭಾರತೀಯ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಒದಗಿಸುತ್ತಿರುವುದು ಕಂಡುಬಂದಿದೆ. ಈ ಅಪ್ಲಿಕೇಶನ್ ಗಳು ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹಾನಿಕಾರಕ ಎಂದು ಗಮನಿಸಲಾಗಿದೆ. ಗೃಹ ವ್ಯವಹಾರಗಳ ಸಚಿವಾಲಯದ ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಕ್ರಮವನ್ನು ಕೈಗೊಂಡಿದೆ.

ಈ ಅಪ್ಲಿಕೇಶನ್ ಗಳಿಂದ ಸಾಲ ಪಡೆದ ನಂತರ ಮರುಪಾವತಿಯ ಬಗ್ಗೆ ಹಲವಾರು ದೂರುಗಳು ಬಂದಿವೆ. ಅಪ್ಲಿಕೇಶನ್ ಗಳ ಮೂಲಕ ಸಣ್ಣ ಸಾಲ ಪಡೆದ ವ್ಯಕ್ತಿಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ದುಪ್ಪಟ್ಟು ಮೊತ್ತವನ್ನು ಪಾವತಿಸಿದ ನಂತರವೂ, ಅಪ್ಲಿಕೇಶನ್ ನ ಹಿಂದಿರು ಕಾಣದ ಕೈಗಳು ಮತ್ತೆ ಹಣ ಪಾವತಿಸುವಂತೆ ಒತ್ತಾಯಿಸಿದ್ದರಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿಯುಂಟಾಗಿದ್ದು, ಮರುಪಾವತಿ ವಿಳಂಬವಾದರೆ ಮಾರ್ಫಿಂಗ್ ಮಾಡಿದ ಫೋಟೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆಗಳು ಕೂಡಾ ವರದಿಯಾಗಿವೆ.

- Advertisement -

ತೆಲಂಗಾಣ, ಒಡಿಶಾ ಮತ್ತು ಉತ್ತರ ಪ್ರದೇಶಗಳಂತಹ ರಾಜ್ಯಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಚೀನಾದ ಸಾಲ ಅಪ್ಲಿಕೇಶನ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಕೇಳಿದ್ದವು. ಇ-ಸ್ಟೋರ್ ಗಳಲ್ಲಿ 94 ಅಪ್ಲಿಕೇಶನ್ ಗಳು ಲಭ್ಯವಿದ್ದರೆ, ಇತರ ಆ್ಯಪ್ ಗಳು ಥರ್ಡ್-ಪಾರ್ಟಿ ಲಿಂಕ್ ಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರ ಕಂಡುಕೊಂಡಿದೆ. ಕಳೆದ ಎರಡು ಕೇಂದ್ರ ಸರ್ಕಾರ ವರ್ಷಗಳಲ್ಲಿ 500ಕ್ಕೂ ಹೆಚ್ಚು ಆ್ಯಪ್ ಗಳನ್ನು ನಿಷೇಧಿಸಿದೆ.

Join Whatsapp