ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣ: ಆರೋಪಿ ರಿಪುದಮನ್ ಸಿಂಗ್ ಮಲಿಕ್ ಹತ್ಯೆ

Prasthutha|

ವ್ಯಾಂಕೋವರ್/ಕೆನಡಾ: 1985 ರ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ರಿಪುದಮನ್ ಸಿಂಗ್ ಮಲಿಕ್ ನನ್ನು ಗುರುವಾರ ಬೆಳಗ್ಗೆ ಕೆನಡಾದ ವ್ಯಾಂಕೋವರ್ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

- Advertisement -


ಜೂನ್ 23, 1985 ರಂದು ಮಾಂಟ್ರಿಯಲ್ ನಿಂದ ದೆಹಲಿಗೆ ಹೊರಟಿದ್ದ ಬೋಯಿಂಗ್ , ಏರ್ ಇಂಡಿಯಾ ವಿಮಾನ 182ರ ಸ್ಫೋಟದ ಮೂವರು ಪ್ರಮುಖ ಆರೋಪಿಗಳಲ್ಲಿ ಮಲಿಕ್, ಇಂದರ್ಜೀತ್ ಸಿಂಗ್ ರಿಯಾತ್ ಮತ್ತು ಅಜೈಬ್ ಸಿಂಗ್ ಬಗ್ರಿ ಇದ್ದರು. ಘಟನೆಯಲ್ಲಿ ಎಲ್ಲಾ 329 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು.

Join Whatsapp