ಸುಳ್ಯ: ಮತ್ತೆ ದೊಡ್ಡ ಶಬ್ದದೊಂದಿಗೆ ಕಂಪಿಸಿದ ಭೂಮಿ

Prasthutha|

ಸುಳ್ಯ: ಸುಳ್ಯ ಮತ್ತು ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ  ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ.

- Advertisement -

ಕೊಡಗು-ಸುಳ್ಯ ಗಡಿ ಪ್ರದೇಶವಾದ ಚೆಂಬು, ಸಂಪಾಜೆ, ಗೂನಡ್ಕ, ಅರಂತೋಡು, ತೊಡಿಕಾನ ಮುಂತಾದೆಡೆ ಬೆಳಗ್ಗೆ 10.09ರ ವೇಳೆಗೆ ಭೂ ಕಂಪನದ ಅನುಭವವಾಗಿದ್ದು,  ಭೂಮಿಯ ಒಳಗಿನಿಂದ ಭಾರೀ ಶಬ್ದ ಕೇಳಿಸಿದೆ ಎಂದು ಜನ ಹೇಳಿಕೊಂಡಿದ್ದಾರೆ.

ಕಂಪನದ ತೀವ್ರತೆಗೆ ಸೋಫಾ, ಮಂಚ, ಪಾತ್ರೆಗಳು ಅಲುಗಾಡಿವೆ ಎಂಬುದಾಗಿ ಜನರು ಮಾಹಿತಿ ನೀಡಿದ್ದಾರೆ. ವಾಹನದಲ್ಲಿ ಸಂಚರಿಸುತ್ತಿದ್ದವರಿಗೂ ಗುಂಡಿಗೆ ಬಿದ್ದಂತ ಅನುಭವ ಉಂಟಾಗಿದೆ.

- Advertisement -

ಇತ್ತೀಚೆಗೆ ಈ ಭಾಗಗಳಲ್ಲಿ ಹತ್ತಕ್ಕೂ ಹೆಚ್ಚು ಭಾರಿ ಭೂಕಂಪನದ ಅನುಭವವಾಗಿದ್ದು, ಜನರು  ಭಯದಿಂದಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.  ಗುಡ್ಡ ಪ್ರದೇಶಗಳಲ್ಲಿ  ಮತ್ತು   ಗುಡ್ಡದ ಅಡಿಭಾಗಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಈ ಭಾಗದ ಜನರು ಭೂಕಂಪನ ಜೊತೆಗೆ ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿತದ ಭೀತಿಯೂ ಎದುರಾಗಿದ್ದು, ಪ್ರತಿದಿನ ಆತಂಕದಲ್ಲಿ ದಿನ ಕಳೆಯುವಂತಾಗಿದೆ.

Join Whatsapp