ಫೆಲೆಸ್ತೀನ್ ಪರ ನಿಂತ ಆರೋಪ; ಕ್ರಿಸ್ಟಿಯಾನೊ ರೊನಾಲ್ಡೊ’ಗೆ ಬಹಿಷ್ಕಾರ

Prasthutha|


ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಬಹಿಷ್ಕಾರ ಹಾಕಲಾಗಿದೆ. ಕತಾರ್ ವಿಶ್ವಕಪ್ ನಂತಹ ಪ್ರಮುಖ ಪಂದ್ಯಾವಳಿಯಲ್ಲಿ ರೊನಾಲ್ಡೊ ಅವರನ್ನು ಹೊರಗಿಡಲಾಗಿದೆ ಎಂದು ಟರ್ಕಿ ಅಧ್ಯಕ್ಷ ತಯ್ಯಿಬ್ ಎರ್ಡೋಗನ್ ಹೇಳಿದ್ದಾರೆ.

- Advertisement -


ಟರ್ಕಿಯ ಪೂರ್ವ ಎರ್ಜುರಮ್ ಪ್ರಾಂತ್ಯದಲ್ಲಿ ನಡೆದ ಯುವಕರ ಸಮಾವೇಶದಲ್ಲಿ ಮಾತನಾಡಿದ ಎರ್ಡೋಗನ್, ಪೋರ್ಚುಗಲ್ ದೇಶದವರು ರೊನಾಲ್ಡೊ ಎಂಬ ತಾರೆಯನ್ನು ವೃಥಾ ಕಳೆದುಕೊಂಡಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಫೆಲೆಸ್ತೀನಿಯರ ಪರವಾಗಿ ನಿಂತಿದ್ದಾರೆ ಎಂಬ ಕಾರಣಕ್ಕೆ ರೊನಾಲ್ಡೊ ಮೇಲೆ ರಾಜಕೀಯ ಬಹಿಷ್ಕಾರ ಹಾಕಿದ್ದಾರೆ. ಆದರೆ ಇಸ್ರೇಲ್-ಫೆಲೆಸ್ತೀನ್ ವಿಷಯದ ಬಗ್ಗೆ ರೊನಾಲ್ಡೊ ಇನ್ನೂ ಬಹಿರಂಗವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿಲ್ಲ ಎಂದು ಹೇಳಿದರು.
ವಿಶ್ವಕಪ್ ಕ್ವಾರ್ಟರ್ ಫೈನಲ್’ನಲ್ಲಿ ಪೋರ್ಚುಗಲ್ ತಂಡ ಮೊರಾಕ್ಕೊ ವಿರುದ್ಧ ಏಕೈಕ ಗೋಲಿನಿಂದ ಸೋಲನುಭವಿಸಿತು. ಈ ಪಂದ್ಯದಲ್ಲಿ ಪೋರ್ಚುಗಲ್ ತಂಡವು ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಬದಲಿ ಆಟಗಾರನಾಗಿ ಕರೆತಂದಿತ್ತು.


ಸ್ವಿಟ್ಜರ್ಲೆಂಡ್ ವಿರುದ್ಧದ ಪ್ರೀ ಕ್ವಾರ್ಟರ್ ಫೈನಲ್’ನಲ್ಲೂ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಆರಂಭಿಕ ಇಲೆವೆನ್’ನಲ್ಲಿ ಹೊರಗಿಡಲಾಗಿತ್ತು. ಐದು ವಿಭಿನ್ನ ವಿಶ್ವಕಪ್’ಗಳಲ್ಲಿ ಸ್ಕೋರ್ ಮಾಡಿದ ಮೊದಲ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ರೊನಾಲ್ಡೋ ಕತಾರ್ ವಿಶ್ವಕಪ್ ನಿಂದ ಕಣ್ಣೀರಿನೊಂದಿಗೆ ಹೊರನಡೆದಿದ್ದರು.
ರೊನಾಲ್ಡೊ ಅವರಂತಹ ಆಟಗಾರನನ್ನು ಕೇವಲ 30 ನಿಮಿಷಗಳು ಉಳಿದಿರುವಾಗ ಆಡಲು ಕರೆತರುವುದು ಅವರ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಕಸಿದುಕೊಳ್ಳುತ್ತದೆ. ರೊನಾಲ್ಡೊ ವಿಶ್ವಕಪ್ ಸಮಯದಲ್ಲಿ ಇಂಗ್ಲಿಷ್ ಪ್ರೀಮಿಯರ್ ಲೀಗ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ತೊರೆದಿದ್ದು, ಸೌದಿ ಅರೇಬಿಯಾದ ಅಲ್ ನಾಸರ್ ಕ್ಲಬ್’ಗೆ 200 ಮಿಲಿಯನ್ ಯೂರೋ ವೇತನಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದು ಎರ್ಡೋಗನ್ ಹೇಳಿದರು.

Join Whatsapp