ಮಂಗಳೂರು: ಗಲ್ಲಿಗೇರಿಸಲು ಆರೋಪಿ ಮುಸ್ಲಿಂ, ಸಂತ್ರಸ್ತೆ ಹಿಂದು ಆಗಿರಲೇಬೇಕೆಂಬ ಅಲಿಖಿತ ನಿಯಮವೇನಾದರು ಮಾಡಿದ್ದೀರಾ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲಾರನ್ನು ಪ್ರಶ್ನಿಸಿದ್ದಾರೆ.
ಇಷ್ಟಕ್ಕೂ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಅಧಿಕಾರ ಇರುವುದು ನ್ಯಾಯಾಲಯಕ್ಕಾ ಅಥವಾ ಸರ್ಕಾರಕ್ಕಾ ಎಂದು ಪ್ರಶ್ಮಿಸಿದ ಅನ್ವರ್ ಸಾದತ್, ಸುರ್ಜಿವಾಲರವರೆ, ಹತ್ಯೆ ಆಗಿರುವುದು ಹುಬ್ಬಳ್ಳಿಯ ನೇಹಾ ಮಾತ್ರವಲ್ಲ, ನೇಜಾರಿನ ನಾಲ್ವರ ಹತ್ಯೆ, ಬೆಂಗಳೂರಿನ ರುಕ್ಸಾನ, ಸುಳ್ಯದ ಅಕ್ಷತಾ, ಪುತ್ತೂರಿನ ಗೌರಿ ಹಾಗೂ ಕಾಮಾಂಧರಿಂದ ಅತ್ಯಾಚಾರಕ್ಕೆ ಒಳಗಾಗಿ ಉಜಿರೆಯ ಸೌಜನ್ಯ ಹತ್ಯೆಯಾಗಿದ್ದಾರೆ. ಹೀಗೆ ಹಲವು ಸಂತ್ರಸ್ತೆಯರು ಇದ್ದಾರೆ. ಎಲ್ಲಾ ಪ್ರಕರಣದ ಅಪರಾಧಿಗಳನ್ನು ಒಂದೇ ದಿನ ಗಲ್ಲಿಗೇರಿಸಿ, ಯಾರದೇ ಆಕ್ಷೇಪಣೆ ಇಲ್ಲ ಎಂದಿದ್ದಾರೆ.
ಮಂಗಳವಾರ ಮಂಗಳೂರಿನಲ್ಲಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸುತ್ತೇನೆ. ಪ್ರಕರಣದ ತನಿಖೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಇಂದು ಹುಬ್ಬಳ್ಳಿಯ ಮೃತ ನೇಹಾಳ ನಿವಾಸಕ್ಕೆ ಇಂದು ಭೇಟಿಕೊಟ್ಟು ತಂದೆ-ತಾಯಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಸುರ್ಜೆವಾಲಾ, ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು. ವಿಶೇಷ ಕೋರ್ಟ್ ಖಂಡಿತ ತ್ವರಿತ ನ್ಯಾಯ ನೀಡಲಿದೆ. ಗಲ್ಲಿಗಿಂತ ಕಡಿಮೆ ಶಿಕ್ಷೆ ಸಿಗಲ್ಲ. 90 ದಿನಗಳಲ್ಲಿ ನ್ಯಾಯ ಸಿಗಲಿದೆ ಅನ್ನುವ ವಿಶ್ವಾಸವಿದೆ ಎಂದಿದ್ದಾರೆ.