ಶಿಕ್ಷಕನ ಗುಂಡಿಕ್ಕಿ ಹತ್ಯೆಗೈದ ಆರೋಪಿಯನ್ನು ಪೊಲೀಸರ ಎದುರೇ ಹೊಡೆದು ಕೊಂದ ಗುಂಪು!

Prasthutha|

ಕುಶಿನಗರ : ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳಿಗೆ ಕಾನೂನಿನ ಮೇಲೆ ಯಾವುದೇ ಭಯ ಹೊರಟುಹೋಗಿದೆ ಎಂಬುದು ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಶಾಲಾ ಶಿಕ್ಷಕರೋರ್ವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆನ್ನಲಾದ ಆರೋಪಿಯನ್ನು ಗುಂಪೊಂದು ಪೊಲೀಸರ ಸಮ್ಮುಖದಲ್ಲೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಕುಶಿನಗರದ ಗ್ರಾಮವೊಂದರಲ್ಲಿ ನಡೆದಿದೆ.

ಸುಧೀರ್ ಕುಮಾರ್ ಸಿಂಗ್ ಎಂಬವರನ್ನು ಭೇಟಿಯಾಗಲು, ಅವರ ಸ್ನೇಹಿತನ ಅಣ್ಣನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಆಗಮಿಸಿದ್ದ. ಮನೆಯಲ್ಲಿ ಆತ ಚಹಾ ಕೂಡ ಕುಡಿದಿದ್ದ. ಸುಧೀರ್ ಸಿಂಗ್ ಸ್ನಾನ ಮಾಡಿ ಮನೆಗೆ ಆಗಮಿಸುತ್ತಿದ್ದಂತೆ, ಆತ ಸಿಂಗ್ ಮೇಲೆ ಪಿಸ್ತೂಲ್ ನಿಂದ ಗುಂಡಿನ ದಾಳಿ ನಡೆಸಿದ ಎಂದು ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಆ ನಂತರ ಗುಂಡಿನ ದಾಳಿ ನಡೆಸಿದಾತ ತಪ್ಪಿಸಿಕೊಳ್ಳಲು ಯತ್ನಿಸಿದ, ಆದರೆ ಸ್ಥಳೀಯರು ಆತನನ್ನು ಹಿಡಿಯಲು ಯತ್ನಿಸಿದರು. ಆಗ ಆತ ಸಿಂಗ್ ರ ಮನೆಯ ಟೆರೇಸ್ ಮೇಲೆ ಹತ್ತಿದ್ದ. ಪಿಸ್ತೂಲ್ ತೋರಿಸಿ, ಸ್ಥಳೀಯರನ್ನು ಬೆದರಿಸಿದ್ದ. ಗಾಳಿಯಲ್ಲಿ ಗುಂಡು ಕೂಡ ಹಾರಿಸಿದ್ದ. ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ಕರೆಸಿದರು.

ಪೊಲೀಸರು ಆಗಮಿಸಿ, ಟೆರೇಸ್ ಮೇಲೆ ಹತ್ತಿ, ಶರಣಾಗುವಂತೆ ಸೂಚಿಸಿದರು. ಆಗ ಗುಂಡಿನ ಚಕಮಕಿಯೂ ನಡೆಯಿತು. ಬಳಿಕ ಆ ವ್ಯಕ್ತಿ ಟೆರೇಸ್ ನಿಂದ ಕೆಳಗಿಳಿದು, ಕೋಣೆಯೊಳಗೆ ಸೇರಿಕೊಂಡು ಬೋಲ್ಟ್ ಹಾಕಿಕೊಂಡಿದ್ದ. ಬಳಿಕ ಗುಂಪು ಬಾಗಿಲು ಒಡೆದು ಆತನನ್ನು ಹೊರಗೆಳೆದುಕೊಂಡು ಬಂದಿತು. ನಂತರ ಗುಂಪು ನಡೆಸಿದ ಭೀಕರ ಹಲ್ಲೆಯಿಂದಾಗಿ ಆತ ಸಾವಿಗೀಡಾದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -