ರೈಲಿನಲ್ಲಿ ಪ್ರಯಾಣಿಕರ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

Prasthutha|

ಕೋಲಾರ: ರೈಲುಗಳ ಕಿಟಕಿ ಪಕ್ಕ ನಿಂತು ಪ್ರಯಾಣಿಕರ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಕೋಲಾರದ ಬಂಗಾರಪೇಟೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಮನೋಜ್, ದರ್ಶನ್ ಬಂಧಿತ ಆರೋಪಿಗಳಾಗಿದ್ದು, ರೈಲು ನಿಲ್ದಾಣದಲ್ಲಿ ಕಿಟಕಿ ಒಳಗೆ ಕೈ ಹಾಕಿ ಪ್ರಯಾಣಿಕರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 50 ಸಾವಿರ ರೂಪಾಯಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತಿದ್ದಾರೆ.

ಇತ್ತೀಚಿಗೆ ಚೆನ್ನೈ- ಬೆಂಗಳೂರು ಮೇಲ್ ಎಕ್ಸ್ ಪ್ರೆಸ್ಸ್ , ತಿರುಪತಿ- ಚಾಮರಾಜನಗರ ಎಕ್ಸ್ ಪ್ರೆಸ್ಸ್ ರೈಲಿನಲ್ಲಿ ಪ್ರಯಾಣಿಕರ ಸರ ಕಳ್ಳತನ ಮಿತಿಮೀರಿದೆ.

Join Whatsapp