ಮನೆಗೆ ಆಕಸ್ಮಿಕ ಬೆಂಕಿ; ಒಂದೇ ಕುಟುಂಬದ 6 ಮಂದಿ ಸಜೀವ ದಹನ

Prasthutha|

ಹೈದರಾಬಾದ್‌: ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಒಂದೇ ಕುಟುಂಬದ ಆರು ಜನರು ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಮಂಚರ್ಯಾಲ ಜಿಲ್ಲೆಯ ಮಂದಮರ್ರಿ ತಾಲೂಕಿನ ವೆಂಕಟಾಪುರದಲ್ಲಿ ನಡೆದಿದೆ.

- Advertisement -


ಮನೆ ಯಜಮಾನ ಶಿವಯ್ಯ (50), ಪತ್ನಿ ಪದ್ಮಾ(45) ಪದ್ಮಾ ಅವರ ಇಬ್ಬರು ಮಕ್ಕಳು ಹಾಗೂ ಅಕ್ಕನ ಮಗಳು ಮೌನಿಕ(23) ಹಾಗೂ ಸಂಬಂಧಿ ಶಾಂತಯ್ಯ ಎಂಬವರು ಮೃತಪಟ್ಟಿದ್ದಾರೆ.

ಶಿವಯ್ಯ ಮತ್ತು ಪದ್ಮಾ ದಂಪತಿ ತೆಲಂಗಾಣದ ಮಂದಮರ್ರಿ ಮಂಡಲದ ವೆಂಕಟಾಪುರದ ಮನೆಯಲ್ಲಿ ವಾಸವಾಗಿದ್ದರು. ಮನೆಗೆ ಪದ್ಮಾ ಅವರ ತಂಗಿ ಮಗಳು ಮೌನಿಕ ಮತ್ತು ಆಕೆಯ ಇಬ್ಬರು ಮಕ್ಕಳು ಬಂದಿದ್ದರು.

- Advertisement -


ರಾತ್ರಿ ಊಟ ಮಾಡಿ ಮಲಗಿದ ಬಳಿಕ ರಾತ್ರಿ 12 ರಿಂದ 12:30ರ ವೇಳೆಗೆ ಏಕಾಏಕಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದವರೆಲ್ಲ ನಿದ್ದೆಯಲ್ಲಿದ್ದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.


ಘಟನೆ ಕುರಿತು ಮಾಹಿತಿ ಹಂಚಿಕೊಂಡಿರುವ ಮಂದಮರ್ರಿಯ ಸರ್ಕಲ್ ಇನ್ಸ್’ಪೆಕ್ಟರ್ ಪ್ರಮೋದ್ ಕುಮಾರ್, ಮಧ್ಯರಾತ್ರಿ 12 ರಿಂದ 12:30ರ ಸುಮಾರಿಗೆ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಮನೆ ಸಂಪೂರ್ಣ ಬೆಂಕಿಗಾಹುತಿ ಆಗಿತ್ತು. ಮನೆಯಲ್ಲಿದ್ದ 6 ಮಂದಿ ಸಜೀವ ದಹನಗೊಂಡಿದ್ದರು. ದುರಂತದ ಹಿಂದಿರುವ ಕಾರಣಗಳ ಬಗ್ಗೆ ತಿಳಿಯಲು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಅಖಿಲ್ ಮಹಾಜನ್ ತಿಳಿಸಿದ್ಧಾರೆ.

Join Whatsapp