ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ಭಾರತ ಮೂಲದ ನಾಲ್ವರು ಮೃತ್ಯು

Prasthutha|

- Advertisement -

ವಿಜಯವಾಡ: ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಆಂಧ್ರಪ್ರದೇಶ ಮೂಲದ ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಸೌದಿ ಅರೇಬಿಯಾದ ರಿಯಾದ್ ಬಳಿ ನಡೆದಿದೆ.

ಮೃತರನ್ನು ಹೈದರಾಬಾದ್ ಮೂಲದ ಗೌಸ್ ದಾಂಟು (35), ಅವರ ಪತ್ನಿ ತಬ್ರಕ್ ಸರ್ವರ್ (31), ಮತ್ತು ಅವರ ಮಕ್ಕಳಾದ ಮುಹಮ್ಮದ್ ದಾಮಿಲ್ ಗೌಸ್ (2) ಮತ್ತು ಮುಹಮ್ಮದ್ ಇಹಾನ್ ಗೌಸ್ (4) ಎಂದು ಗುರುತಿಸಲಾಗಿದೆ. ಐದನೆಯವರ ಗುರುತು ಪತ್ತೆಯಾಗಿಲ್ಲ. ಗೌಸ್ ದಾಂಟು ಅವರು ಕುವೈತ್ ಇಕಾಮಾವನ್ನು ಹೊಂದಿದ್ದಾರೆ.

- Advertisement -

ಕುವೈತ್ ನಲ್ಲಿ ಉದ್ಯೋಗಿಯಾಗಿರುವ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಗೌಸ್ ದಂಡು ಎಂಬುವವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸೌದಿ ಅರೇಬಿಯಾಗೆ ತೆರಳಿದ್ದರು. ಅಪಘಾತ ಸಂಭವಿಸಿದಾಗ ಅವರ ಕುಟುಂಬವು ಕುವೈತ್ ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿತ್ತು ಎಂದು ತಿಳಿದು ಬಂದಿದೆ. ಅವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.