ಬಿಬಿಎಂಪಿಯ 27 ವಿವಿಧ ಕಚೇರಿಗಳ ಮೇಲೆ ಎಸಿಬಿ ದಾಳಿ, ಶೋಧ

Prasthutha|

ಬೆಂಗಳೂರು: ಸರ್ಕಾರಿ ಸ್ವತ್ತನ್ನು  ದುರುಪಯೋಗ ಪಡಿಸಿಕೊಂಡ ದೂರುಗಳ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಿಬಿಎಂಪಿ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

- Advertisement -

ಎಸಿಬಿ ಎಸ್ ಪಿ ನೇತೃತ್ವದಲ್ಲಿ  ಬಿಬಿಎಂಪಿಯ 27 ವಿವಿಧ ಕಚೇರಿಗಳ ಮೇಲೆ ನಗರದ ವಿವಿಧ ಕಡೆ 11 ಸ್ಥಳಗಳಲ್ಲಿ ಏಕಕಾಲದಲ್ಲಿ ಡಿವೈಎಸ್‍ ಪಿ, ಪೊಲೀಸ್ ಇನ್ಸ್‌ಪೆಕ್ಟರ್ ರವರನ್ನು ಒಳಗೊಂಡಂತೆ 200 ಮಂದಿ ಅಧಿಕಾರಿಗಳು ಸಿಬ್ಬಂದಿ ದಾಳಿ ನಡೆಸಿ ಶೋಧ ಕೈಗೊಂಡು ಪರಿಶೀಲನೆ ‌ನಡೆಸಿದ್ದಾರೆ.

ಬಿಬಿಎಂಪಿಯ ಟಿಡಿಆರ್, ನಗರ ಯೋಜನಾ‌ ಕಚೇರಿ, ಖಾತಾ ನೀಡುವ ಕಚೇರಿಗಳಲ್ಲಿ ಕಡತಗಳ ಪರಿಶೀಲನೆಯನ್ನು ನಡೆಸಲಾಗಿದೆ.

- Advertisement -

ಪಾಲಿಕೆಯ ಕೇಂದ್ರ ಕಛೇರಿ, ವಲಯ ಕಛೇರಿ,  ಹಾಗೂ ಜಂಟಿ ಆಯುಕ್ತರ ಕಛೇರಿಗಳು, ಅಲ್ಲದ ರೆವಿನ್ಯೂ ಕಛೇರಿ, ನಗರಯೋಜನಾ ವಿಭಾಗ, ಜಾಹಿರಾತು ವಿಭಾಗ, ಟಿ.ಡಿ.ಆರ್ ವಿಭಾಗ, ಆರೋಗ್ಯ ವಿಭಾಗ, ರಸ್ತೆ ಮತ್ತು ಮೂಲಸೌಕರ್ಯ(ರಾಜಕಾಲುವೆ) ವಿಭಾಗದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳು ಹಾಗೂ  ಸಿಬ್ಬಂದಿಗಳು ತಮಗೆ ವಹಿಸಿರುವ ಮತ್ತು ನಿಯಂತ್ರಣದ ಸರ್ಕಾರಿ ಸ್ವತ್ತನ್ನು ಅಪ್ರಮಾಣಿಕವಾಗಿ ಮತ್ತು ಮೋಸದಿಂದ ದುರುಪಯೋಗ ಪಡಿಸಿಕೊಂಡು ಮಧ್ಯವರ್ತಿಗಳು, ಖಾಸಗಿ ವ್ಯಕ್ತಿಗಳೊಂದಿಗೆ ಸೇರಿಕೊಂಡು ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ, ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಅನುವು ಮಾಡಿಕೊಟ್ಟು ಸರ್ಕಾರಕ್ಕೆ ನಷ್ಟ ಉಂಟುಮಾಡಿದ ಹಲವು ದೂರುಗಳ ಹಿನ್ನೆಲೆಯಲ್ಲಿ ದಾಳಿ‌ ನಡೆಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.



Join Whatsapp