September 5, 2020

ಮಸೀದಿಯಲ್ಲಿ ಎಸಿ ಸ್ಫೋಟ | 12 ಸಾವು, 25 ಮಂದಿಗೆ ಗಂಭೀರ ಗಾಯ

ಢಾಕಾ : ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರ ವಲಯದ ಮಸೀದಿಯೊಂದರಲ್ಲಿ ಆರು ಹವಾನಿಯಂತ್ರಕ ಯಂತ್ರಗಳು ಸ್ಫೋಟಗೊಂಡ ಕಾರಣ 12 ಮಂದಿ ಸಾವಿಗೀಡಾಗಿದ್ದು, 25 ಮಂದಿ ಗಾಯಗೊಂಡಿದ್ದಾರೆ. ನಾರಾಯಣಗಂಜ್ ಮಸೀದಿಯಲ್ಲಿ ಶುಕ್ರವಾರ 9 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.

ಶುಕ್ರವಾರ ಓರ್ವ ಬಾಲಕ ಮೃತಪಟ್ಟಿದ್ದನು, ಉಳಿದ 11 ಮಂದಿ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನೂ 25 ಮಂದಿ ಗಂಭೀರ ಗಾಯಗೊಂಡಿದ್ದು, ಶೇ.90ರಷ್ಟು ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಸ್ಥಿತಿ ಎದುರಿಸುತ್ತಿದ್ದಾರೆ.
ಪೈಪ್ ಲೈನ್ ನಲ್ಲಿ ಸೋರಿಕೆಯಾಗಿ ಸಂಗ್ರಹವಾದ ಅನಿಲ, ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಅಂದಾಜಿಸಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ