ಮಾಜಿ ಸಂಸದ ಆರ್. ಧ್ರುವನಾರಾಯಣ ನಿಧನ ಆಘಾತ ಉಂಟು ಮಾಡಿದೆ: ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ಹಠಾತ್ ನಿಧನ ಆಘಾತ ಉಂಟು ಮಾಡಿದೆ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಕಂಬನಿ ಮಿಡಿದಿದ್ದಾರೆ.

- Advertisement -

ಅವರು ನನಗೆ ವೈಯಕ್ತಿಕವಾಗಿ ಬಹಳ ಆತ್ಮೀಯರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ನಮ್ಮ ಎಸ್.ಡಿ.ಪಿ.ಐ ಪಕ್ಷದ ಬೆಂಬಲ ನೀಡಿದ್ದೆವು. 2013 ರ ಚಾಮರಾಜನಗರದ ನಗರಸಭಾ ಚುನಾವಣೆಯಲ್ಲಿ ನಾವು ಗೆದ್ದಿದ್ದಾಗ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು. MLC ಚುನಾವಣೆಗೆ ಸಂಬಂಧಿಸಿದಂತೆ, 2015 ರಲ್ಲಿ ಧರ್ಮಸೇನಾ ಹಾಗೂ 2021 ರಲ್ಲಿ ಡಾ. ತಿಮ್ಮಯ್ಯ ರವರಿಗೆ ನಮ್ಮ ಚುನಾಯಿತ ಜನಪ್ರತಿನಿಧಿಗಳು ಬೆಂಬಲ ನೀಡಿದರು. ಈ ಎಲ್ಲಾ ಪ್ರಕ್ರಿಯೆ ದಿವಂಗತ ಧ್ರುವ ನಾರಾಯಣ್ ರವರ ಉಪಸ್ಥಿತಿಯಲ್ಲಿ ಆಯಿತು. ಫ್ಯಾಸಿಸ್ಟ್ ಮನಸ್ಥಿತಿರವರನ್ನು ಅಧಿಕಾರದಿಂದ ದೂರ ಇಡಬೇಕು. ಈ ನಿಟ್ಟಿನಲ್ಲಿ ಸಮಾನ ಮನಸ್ಕರು ಒಂದಾಗ ಬೇಕು ಎಂಬುದು ಅವರ ನಿಲುವಾಗಿತ್ತು ಎಂದು ಮಜೀದ್ ಹೇಳಿದ್ದಾರೆ.

ಬಹಳ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ಅವರು ಯಾರೇ ಮಾತಾಡಿದರೂ ಸಹನೆಯಿಂದ ಆಲಿಸಿ ಸ್ಪಂದಿಸುತ್ತಿದ್ದರು. ಅವರು ಸಂಸದರಾಗಿದ್ದ ಅವಧಿಯಲ್ಲಿ ಚಾಮರಾಜನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಈ ಅಕಾಲಿಕ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸೃಷ್ಟಿಕರ್ತನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಧ್ರುವ ನಾರಾಯಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.



Join Whatsapp