ದೆಹಲಿ ಗಲಭೆಯ ವೇಳೆ ನೆರವಿಗೆ ಧಾವಿಸದ AAP ಅಭ್ಯರ್ಥಿಯನ್ನು ಸೋಲಿಸಿದ ಚೌಹಾಣ್ ಬಂಗರ್ ಕ್ಷೇತ್ರದ ಮುಸ್ಲಿಮ್ ಮತದಾರರು

Prasthutha|

ದೆಹಲಿ ಸ್ಥಳೀಯ ಸಂಸ್ಥೆಗೆ (MCD) ನಡೆದ ಉಪಚುನಾವಣೆಯಲ್ಲಿ ಕಳೆದ ವರ್ಷ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಗಲಭೆಯ ವೇಳೆ ಕ್ಷೇತ್ರದ ಬಹುಸಂಖ್ಯಾತ ಮುಸ್ಲಿಮ್ ಮತದಾರರಿಗೆ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸದೆ, ಗಲಭೆಕೋರರು ಅಲ್ಪಸಂಖ್ಯಾತ ಮುಸಲ್ಮಾನರ ವಿರುದ್ಧ  ರುದ್ರನೃತ್ಯಗೈಯ್ಯಲು ಪರೋಕ್ಷವಾಗಿ ನೆರವಾಗಿದ್ದ AAP ನ ಅಭ್ಯರ್ಥಿಯನ್ನು ಅಲ್ಲಿನ ಮತದಾರರು ಈ ಬಾರಿ ಸೋಲಿಸಿದ್ದಾರೆ. ಆ ಮೂಲಕ ಆಪತ್ಕಾಲದಲ್ಲಿ ತಮ್ಮ ನೆರವಿಗೆ ಧಾವಿಸದವರು ನಮಗೆ ಅನಿವಾರ್ಯರಲ್ಲ ಎಂಬ ಸ್ಪಷ್ಟ ಸಂದೇಶವನ್ನು ಮತದಾರರು ರವಾನಿಸಿದ್ದಾರೆ. ಮಾತ್ರವಲ್ಲ ಇವರಿಗೆ ನಾವಲ್ಲದೆ ಬೇರೆ ಆಯ್ಕೆಯಿಲ್ಲವೆಂದು ಅಲ್ಲಿನ ಮುಸಲ್ಮಾನರನ್ನು ಲಘುವಾಗಿ ಪರಿಗಣಿಸಿದ್ದವರಿಗೆ ಮತದಾರರು ಗಂಭೀರ ಉತ್ತರ ಕೊಟ್ಟಿದ್ದಾರೆ. ಆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯು ವಿಜಯಶಾಲಿಯಾಗಿದ್ದಾರೆ.

- Advertisement -

ಈಶಾನ್ಯ ದೆಹಲಿಯ ವ್ಯಾಪ್ತಿಗೆ ಸೇರಿದ ಚೌಹಾಣ್ ಬಂಗರ್ ಪ್ರದೇಶದಲ್ಲಿ ಕಳೆದ ಫೆಬ್ರವರಿ 2020ರಂದು ಬಿಜೆಯು ನಡೆಸಿದ ಕೋಮು ಗಲಭೆಯಲ್ಲಿ ಅಪಾರವಾದ ಮಾನ, ಪ್ರಾಣ, ಆಸ್ತಿ ಹಾನಿ ಸಂಭವಿಸಿದಾಗ ವಾರ್ಡಿನ AAPನ ನಾಯಕರು ತಮಗೆ ಸಾಧ್ಯವಿದ್ದ ಸಹಾಯವನ್ನು ಮಾಡಿರಲಿಲ್ಲ ಎನ್ನಲಾಗಿದೆ. ಇದರ ವಿರುದ್ಧ ಮುಸ್ಲಿಂ ಮತದಾರರು ಈ ಬಾರಿಯ ಸ್ಥಳೀಯ ಚುನಾವಣೆಯಲ್ಲಿ AAPಗೆ ಪಾಠ ಕಲಿಸುವ ನಿಟ್ಟಿನಲ್ಲಿ ಮತದಾನ ಮಾಡಿದೆಯೆಂದೇ ಈ ಫಲಿತಾಂಶವನ್ನು ವಿಶ್ಲೇಷಿಸಲಾಗುತ್ತಿದೆ.

5 ವಾರ್ಡುಗಳಿಗೆ ನಡೆದ ಉಪಚುನಾವಣೆಯಲ್ಲಿ ಆಪ್ ಪಕ್ಷ ನಾಲ್ಕು ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ. ಬಿಜೆಪಿ ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡು ಮೂಲೆಗುಂಪಾಗಿದೆ. ಮಾತ್ರವಲ್ಲ ಅತಿ ಕಠಿಣ ಪರಿಸ್ಥಿತಿಯಲ್ಲೂ ಕನಿಷ್ಟ 32ರಿಂದ 35 ಶೇಕಡಾದವರೆಗೆ ಮತ ಪಡೆಯುತ್ತಿದ್ದ ಬಿಜೆಪಿ ಮತ ಪ್ರಮಾಣ 20 ಶೇಕಡಾಕ್ಕಿಂತಲೂ ಕೆಳೆಗೆ ಕುಸಿದಿರುವುದು ಗಮನಾರ್ಹವಾಗಿದೆ.



Join Whatsapp