ನವದೆಹಲಿ । ಸಿಬಿಐ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಆಕಾರ್ ಪಟೇಲ್

Prasthutha|

ನವದೆಹಲಿ: ನ್ಯಾಯಾಲಯದ ಆದೇಶದ ಹೊರತಾಗಿಯೂ ತನ್ನ ವಿರುದ್ಧ ಹೊರಡಿಸಲಾಗಿದ್ದ ಲುಕ್ ಔಟ್ ನೋಟಿಸನ್ನು ಹಿಂಪಡೆಯದ ಸಿಬಿಐ ವಿರುದ್ಧ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಮುಖ್ಯಸ್ಥ ಆಕಾರ್ ಪಟೇಲ್ ಅವರು ಶುಕ್ರವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

- Advertisement -

ತನ್ನ ವಿರುದ್ಧ ಹೊರಡಿಸಲಾದ ಲುಕ್ ಔಟ್ ನೋಟಿಸನ್ನು ಹಿಂಪಡೆಯದ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಅವರು ಲುಕ್ ಔಟ್ ನೋಟಿಸನ್ನು ಹಿಂಪಡೆಯಲು ಸೂಚಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಆಕಾರ್ ಪಟೇಲ್ ವಿರುದ್ಧ ಹೊರಡಿಸಲಾಗಿದ್ದ ಲುಕ್ ಔಟ್ ನೋಟಿಸ್ ನಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ದೇಶ ತೊರೆಯದಂತೆ ಪಟೇಲ್ ಅವರನ್ನು ಎರಡು ಸಲ ತಡೆದಿದ್ದರು.

- Advertisement -

ವಿದೇಶಿ ದೇಣಿಗೆ ನಿಯಮಾವಳಿ ಕಾಯ್ದೆ ( ಎಫ್. ಸಿ.ಆರ್.ಎ) ಉಲ್ಲಂಘನೆಗೆ ಸಂಬಂಧಿಸಿದಂತೆ ಪಟೇಲ್ ವಿರುದ್ಧ ಹೊರಡಿಸಿದ್ದ ಲುಕ್ ಔಟ್ ಸುತ್ತೋಲೆಯನ್ನು ಹಿಂಪಡೆಯುವಂತೆ ದೆಹಲಿ ನ್ಯಾಯಾಲಯವು ಸಿಬಿಐ ಗೆ ಸೂಚಿಸಿತ್ತು.

ಮಾತ್ರವಲ್ಲ ಪಟೇಲ್ ಅವರೊಂದಿಗೆ ಕ್ಷಮೆ ಯಾಚಿಸುವಂತೆಯೂ ತನಿಖಾ ಸಂಸ್ಥೆಗೆ ನ್ಯಾಯಾಲಯ ಆದೇಶಿಸಿತ್ತು.

Join Whatsapp