ವೋಟರ್ ಐಡಿಗೂ ಆಧಾರ್ ಲಿಂಕ್: ಲೋಕಸಭೆಯಲ್ಲಿ ಮಸೂದೆಗೆ ಅಂಕಿತ

Prasthutha|

ನವದೆಹಲಿ: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸೋಮವಾರ (ಡಿಸೆಂಬರ್ 20) ಮತದಾರರ ಗುರುತು ಚೀಟಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಚುನಾವಣಾ ಕಾನೂನು(ತಿದ್ದುಪಡಿ) ಮಸೂದೆ, 2021 ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.

- Advertisement -

ಆಧಾರ್ ಎಂಬುದು ನಿವಾಸದ ದಾಖಲೆಯಾಗಿದೆ ವಿನಃ, ಅದು ಪೌರತ್ವದ ಪುರಾವೆ ಅಲ್ಲ. ಒಂದು ವೇಳೆ ನೀವು ಮತದಾರನ ಬಳಿ ಆಧಾರ್ ಕಡ್ಡಾಯ ಎಂದು ಹೇಳಿದ್ರೆ, ಅದು ಅವರು ವಾಸವಾಗಿರುವುದಕ್ಕೆ ದೊರೆತ ದಾಖಲೆಯಾಗಲಿದೆ. ಇದರಿಂದಾಗಿ ನೀವು(ಕೇಂದ್ರ ಸರ್ಕಾರ) ಈ ದೇಶದ ಪ್ರಜೆಯಲ್ಲದವರಿಗೂ ಮತದಾನದ ಹಕ್ಕನ್ನು ಕೊಟ್ಟಂತಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಲೋಕಸಭೆಯಲ್ಲಿ ತಿಳಿಸಿದ್ದರು.

ಈ ವಿಧೇಯಕದಿಂದ ದೇಶದಲ್ಲಿನ ನಕಲಿ ಮತದಾನ ಕೊನೆಗೊಳ್ಳಲಿದೆ. ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ವಿಶ್ವಾಸಾರ್ಹಗೊಳಿಸಲಿದೆ ಎಂದು ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಈ ಕಾಯ್ದೆಯ ಪ್ರಕಾರ, ಮತದಾರನ ಗುರುತು ಪತ್ತೆಗಾಗಿ, ಯಾರು ಮತದಾರರಾಗಿ ನೋಂದಾಯಿಸಲು ಬರುವ ಜನರ ಆಧಾರ ಸಂಖ್ಯೆಯನ್ನು ಪಡೆಯಲು ಚುನಾವಣಾ ನೋಂದಣಾಧಿಕಾರಿಗೆ ಅವಕಾಶ ನೀಡುತ್ತದೆ. ಆದರೆ ವಿಪಕ್ಷಗಳ ಆರೋಪಗಳು ಆಧಾರ ರಹಿತವಾದದ್ದು ಎಂದು ರಿಜಿಜು ಹೇಳಿದರು.

Join Whatsapp