ಮಂಗಳೂರಿನಲ್ಲಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ

Prasthutha|

ಮಂಗಳೂರು: ನಿಷೇಧಿತ MDMA ಮಾರಾಟ ಜಾಲದ ಪ್ರಮುಖ ಡ್ರಗ್ ಪೆಡ್ಲರ್​ ನೈಜೀರಿಯಾ ಮೂಲದ ಮಹಿಳೆಯನ್ನು ಬೆಂಗಳೂರಿನ ಯಲಹಂಕದ ಚೊಕ್ಕನ ಹಳ್ಳಿಯಲ್ಲಿ ಬಂಧಿಸಲಾಗಿದೆ.

- Advertisement -

ನೈಜೀರಿಯಾ ಮೂಲದ ಅಡೆವೊಲೆ ಅಡೆಟುಡು ಆನು(33) ಬಂಧಿತ ಮಹಿಳೆ.

 ಇತ್ತಿಚೇಗೆ ಮಂಗಳೂರು ಸಿಸಿಬಿ ಪೊಲೀಸರು ಲಕ್ಷಾಂತರ ಮೌಲ್ಯದ MDMA ಮಾರಾಟ ಜಾಲ ಭೇದಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಗೆ ಮಹಿಳೆ ಅಡೆವೊಲೆ ಅಡೆಟುಡು ಆನು MDMA ಡ್ರಗ್ ಪೂರೈಸಿದ್ದಳು. ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ ಮಹಿಳೆಯ ಬೆಂಗಳೂರಿನ ಮನೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಲಾಗಿತ್ತು. ದಾಳಿ ವೇಳೆ 400 ಗ್ರಾಂ ತೂಕದ 20 ಲಕ್ಷ ರೂಪಾಯಿ ಮೌಲ್ಯದ MDMA ಮತ್ತು ನಗದು, ಐಫೋನ್‌ ಮೊಬೈಲ್ ಸೇರಿದಂತೆ ಒಟ್ಟು 20 ಲಕ್ಷದ 52 ಸಾವಿರ ಮೌಲ್ಯದ ಸೊತ್ತುಗಳ ವಶಕ್ಕೆ ಪಡೆಯಲಾಗಿದೆ.

- Advertisement -

ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಮಹಿಳೆ

ಈ ಬಂಧಿತ ಮಹಿಳೆ ನೈಜೀರಿಯಾ ದೇಶದಿಂದ ವ್ಯಾಸಂಗ ವೀಸಾದಡಿ ಭಾರತಕ್ಕೆ ಬಂದಿದ್ದರು. ಸ್ವಲ್ಪ ಸಮಯ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಮಹಿಳೆ ಬಳಿಕ ಈ ದಂಧೆಗೆ ಇಳಿದಿದ್ದಾರೆ. ಇನ್ನು ಆರೋಪಿಯ ವಿರುದ್ಧ ಈಗಾಗಲೇ ಮಂಗಳೂರಿನಲ್ಲಿ ಒಟ್ಟು 7 ಪ್ರಕರಣ ದಾಖಲಾಗಿದೆ. ಇನ್ನು ಇದುವರೆಗೂ ಪೊಲೀಸರು ಬಂಧಿಸಿದ 7 ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಕೂಡ ಈಕೆಯಿಂದಲೇ ಮಾದಕ ವಸ್ತು ಖರೀದಿ ಮಾಡಿದ್ದರಂತೆ. ಸದ್ಯ ಆರೋಪಿ ಮಹಿಳೆಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.