ಕಡಲ್ಕೊರೆತ ಸ್ಥಳ ಪರಿಶೀಲನೆ ನಡೆಸಿದ ಸಚಿವರ ತಂಡ

Prasthutha|

ಮಂಗಳೂರು: ಕಡಲ ಕೊರೆತಕ್ಕೆ ಒಳಗಾಗಿರುವ ಉಳ್ಳಾಲದ ಬಟ್ಪಪಾಡೆ ಸ್ಥಳಕ್ಕೆ ಸಚಿವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

- Advertisement -

ಕಂದಾಯ ಸಚಿವರಾದ ಆರ್.ಅಶೋಕ್,  ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್, ಬಂದರು, ಮೀನುಗಾರಿಕೆ ಜಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್,  ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ,  ಹಾಗೂ ಕಂದಾಯ ಅಧಿಕಾರಿಗಳು ರ ಭೇಟಿ ನೀಡಿ ಕಡಲ್ಕೊರೆತ ಸ್ಥಳವನ್ನು ಪರಿಶೀಲನೆ ಮಾಡಿದರು.

ಅಲ್ಲದೆ, ಸ್ಥಳೀಯರೊಂದಿಗೆ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ನಂತರ ಉಳ್ಳಾಲಕ್ಕೆ ತೆರಳಿ ಕಡಲ ಕೊರೆತಕ್ಕೆ ಒಳಗಾದ ಪ್ರದೇಶಗಳನ್ನು ಪರಿಶೀಲಿಸಿದರು.

- Advertisement -



Join Whatsapp