ತನ್ನ ಗೊಂಬೆಯ ದೇಹದ ಉಷ್ಣತೆಯನ್ನೂ ಪರೀಕ್ಷೆ ನಡೆಸುವಂತೆ ಹೇಳಿದ ಮುಗ್ಧ ಬಾಲಕಿ!

Prasthutha|

ಕೋವಿಡ್ ವಿರುದ್ಧದ ಹೋರಾಟದಲ್ಲಿ ಜವಾಬ್ದಾರಿಯುತ ಪ್ರಜೆಯೆಂದರೆ ಹೀಗಿರಬೇಕೆಂದ ನೆಟ್ಟಿಗರು!

- Advertisement -

ಬೀಜಿಂಗ್: ಕೋವಿಡ್ ಸೋಂಕಿನ ರಕ್ಷಣೆಗಾಗಿ ಜಗತ್ತಿನಾದ್ಯಂತ ಎಲ್ಲರೂ ಎಚ್ಚರಿಕೆಯಿಂದ ಇರುತ್ತಾರೆ. ಮಾಸ್ಕ್ ಗಳು, ಸ್ಯಾನಿಟೈಸರ್ ಗಳು ಮತ್ತು ಸಾಮಾಜಿಕ ಅಂತರವು ಕೋವಿಡ್ ರಕ್ಷಣೆಯ ಪ್ರಮುಖ ಅಸ್ತ್ರಗಳಾಗಿವೆ.

ಮಾಲ್ ಗಳು ಮತ್ತು ಉದ್ಯಾನವನಗಳನ್ನು ಪ್ರವೇಶಿಸಬೇಕಾದರೆ, ನಿಮ್ಮ ದೇಹದ ಉಷ್ಣತೆಯನ್ನೂ ಕೂಡ ಪರಿಶೀಲಿಸುತ್ತಾರೆ. ಕೋವಿಡ್ ಅವಧಿಯಲ್ಲಿ ಈ ದೃಶ್ಯಗಳು ಹೊಸತೇನೂ ಅಲ್ಲ. ಇದು ಮಾನವ ಜೀವನದ ಭಾಗವಾಗಿ ಬದಲಾಯಿತು. ಮಕ್ಕಳು ಕೂಡ ಹೊಸ ವಿಧಾನಗಳಿಗೆ ಬೇಗನೆ ಒಗ್ಗಿಕೊಳ್ಳುತ್ತಾರೆ. ಅಂತಹದೊಂದು ವಿಡಿಯೋ ಈಗ ವೈರಲ್ ಆಗಿದೆ.

- Advertisement -

ಗೊಂಬೆಯೊಂದಿಗೆ ಬಂದ ಮಗುವೊಂದು ಭದ್ರತಾ ಸಿಬ್ಬಂದಿಯ ಬಳಿ ಮೊದಲು ತನ್ನ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಕೈಯೊಡ್ಡುತ್ತಾ ನಂತರ ತನ್ನ ಗೊಂಬೆಯನ್ನು ಪರೀಕ್ಷಿಸಲು ಹೇಳುತ್ತಾಳೆ. ಸೆಕ್ಯೂರಿಟಿ ಗಾರ್ಡ್ ನಗು ಮುಖದಿಂದ ಮಗುವಿನ ಜೊತೆ ಗೊಂಬೆಯನ್ನೂ ಕೂಡಾ ಪರೀಕ್ಷಿಸಿ ಕಳುಹಿಸಿಕೊಡುತ್ತಾನೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗಿದ್ದು, ಒಬ್ಬ ಜವಾಬ್ದಾರಿಯುತ ಪ್ರಜೆ ಹೀಗಿರಬೇಕು ಎಂದು ಹಲವರು ಪ್ರಶಂಸಿದ್ದಾರೆ.

Join Whatsapp