ಜಹಾಂಗೀರ್ ಪುರಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಎಂಬ ಪೋಟೋ ವೈರಲ್ ನ ಅಸಲಿಯತ್ತು ಫ್ಯಾಕ್ಟ್ ಚೆಕ್ ನಲ್ಲಿ ಬಹಿರಂಗ!

Prasthutha|

ನವದೆಹಲಿ: ದೆಹಲಿಯ ಜಹಾಂಗೀರ್ ಪುರಿಯಲ್ಲಿ ನಡೆದ ಮುಸ್ಲಿಮ್ ಹಿಂಸಾಚಾರವನ್ನು ತೋರಿಸುತ್ತದೆ ಎಂಬ ತಲೆಬರಹದಲ್ಲಿ ಸಾರ್ವಜನಿಕರಿಂದ ಪೇದೆಯೊಬ್ಬರು ಹಲ್ಲೆಗೊಳಗಾದ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಅದು ಎರಡು ವರ್ಷ ಹಿಂದಿನದ್ದು ಎಂದು ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ವರದಿ ಮಾಡಿದೆ.

- Advertisement -

ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ಏಪ್ರಿಲ್ 16 ರಂದು ಹನುಮಾನ್ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಕೋಮು ಹಿಂಸಾಚಾರ ಸಂಭವಿಸಿದ್ದು ಪೊಲೀಸರ ಪ್ರಕಾರ, ಎಂಟು ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ನಿವಾಸಿ ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದಾರೆ.

ಇದರ ನಂತರ, ಜಹಾಂಗೀರ್ ಪುರಿಯಲ್ಲಿ ನಡೆದ ಹಿಂಸಾಚಾರವನ್ನು ತೋರಿಸುವ ಫೋಟೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಒಬ್ಬ ಪೊಲೀಸ್ ಪೇದೆ ರಸ್ತೆಯ ಮೇಲೆ ಬಹುಶಃ ಗಾಯಗೊಂಡು ಮಲಗಿದ್ದು ಮತ್ತು ಒಬ್ಬ ವ್ಯಕ್ತಿಯು ಆತನ ಮೇಲೆ ಕಲ್ಲನ್ನು ಗುರಿಯಿಡುವಂತೆ ತೋರುತ್ತದೆ.

- Advertisement -

#DelhiRiots ಮತ್ತು #Jahangirpuri ಹ್ಯಾಶ್ ಟ್ಯಾಗ್ ಗಳೊಂದಿಗೆ ಜನರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಆದರೆ ಫ್ಯಾಕ್ಟ್ ಚೆಕ್ ಮೂಲಕ ತಿಳಿಯ ಬರುವುದೇನೆಂದರೆ, ಇದು ಡಿಸೆಂಬರ್ 20, 2019 ರ ಚಿತ್ರವಾಗಿದ್ದು ಗುಜರಾತ್, ಅಹ್ಮದಾಬಾದ್ ನ ಶಾಹ್ ಆಲಂ ಪ್ರದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ ಸಮಯದಲ್ಲಿ ತೆಗೆಯಲಾಗಿದೆ.

ಸರಿಸುಮಾರು ಎರಡೂವರೆ ವರ್ಷಗಳ ಹಿಂದಿನ ಚಿತ್ರವನ್ನು ಇತ್ತೀಚೆಗಿನ ಗಲಭೆಯದ್ದೆಂದು ಲಗತ್ತಿಸಿ ಮತ್ತೇ ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದನ್ನು ಕೂಡಾ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ಈ ಸಮಯದಲ್ಲಿ ಖಂಡಿಸಿದೆ.

Join Whatsapp