ಲಂಡನ್: ಎದೆ ಹಾಲನ್ನು ಸಂಗ್ರಹಿಸಿ ಅದರಿಂದ ಆಭರಣ ಮಾಡುವ ಹೊಸ ಟ್ರೆಂಡ್ ಆರಂಭವಾಗಿದ್ದು, 2023ರ ಹೊತ್ತಿಗೆ ಈ ಆಭರಣಗಳಿಂದ ಕನಿಷ್ಠ 15 ಕೋಟಿ ರೂ. ಗಳಿಸಬಹುದೆಂಬ ನಿರೀಕ್ಷೆಯನ್ನು ಇದರ ತಯಾರಕರು ವ್ಯಕ್ತಪಡಿಸಿದ್ದಾರೆ.
ಮೂರು ಮಕ್ಕಳ ತಾಯಿಯಾಗಿರುವ ಲಂಡನ್ ನ ಸಾಫಿಯಾ ರಿಯಾದ್ ಮತ್ತು ಆಕೆಯ ಪತಿ ಆದಂ ರಿಯಾದ್ ಈ ಆಭರಣ ವಿನ್ಯಾಸಗಳ ರೂವಾರಿಗಳಾಗಿದ್ದಾರೆ.
ತಾಯಿಯ ಎದೆ ಹಾಲನ್ನು ಗಟ್ಟಿಯಾಗಿಸಿ ಅದರಿಂದ ಉಂಗುರದ ಹರಳು, ಸರದ ಡಾಲರ್, ಕಿವಿಯ ಓಲೆ ಸೇರಿ ಅನೇಕ ರೀತಿಯ ಆಭರಣ ಮಾಡಲಾಗುತ್ತಿದೆ.
ಆಭರಣಗಳ ಕುರಿತಾದ ಮಾಹಿತಿಗಳನ್ನು ಹಂಚಿಕೊಂಡಿರುವ ಸಾಫಿಯಾ ರಿಯಾದ್ “ಹಾಲನ್ನು ಘನೀಕರಿಸಲೆಂದು ಹೊಸ ರೀತಿಯ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಅದರಿಂದಾಗಿ ಹಾಲಿನ ಬಣ್ಣದಲ್ಲೂ ಒಂದಿಷ್ಟೂ ಬದಲಾವಣೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಒಂದು ಆಭರಣಕ್ಕೆ ಕನಿಷ್ಠ 30ಎಂಎಲ್ ಎದೆ ಹಾಲು ಬೇಕು. ನಾನು ನನ್ನ ಮಗುವಿಗೆ ಹಾಲಿಣುಸಿದ ನೆನಪು ಸದಾ ಕಣ್ಣೆದುರು ಕಾಣುವಂತೆ ಮಾಡುವುದು ಹೇಗೆ ಎಂದು ಆಲೋಚಿಸಿದಾಗ ಈ ಐಡಿಯಾ ಹೊಳೆದಿತ್ತು ಎಂದು ಹೇಳಿದ್ದಾರೆ.