ರಿಲಯನ್ಸ್ ಪವರ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ನಿರ್ದೇಶಕ ಅನಿಲ್ ಅಂಬಾನಿ ಸ್ಥಾನಕ್ಕೆ ರಾಜೀನಾಮೆ

Prasthutha|

ಹೊಸದಿಲ್ಲಿ: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಶುಕ್ರವಾರ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶದ ನಂತರ ಯಾವುದೇ ಕಂಪನಿಯೊಂದಿಗೆ ಕೆಲಸ  ಮಾಡದಂತೆ ಅವರನ್ನು ನಿರ್ಬಂಧಿಸಲಾಗಿದೆ.

“ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಮಧ್ಯಂತರ ಆದೇಶದ ಪಾಲನೆಗಾಗಿ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನಿಲ್ ಡಿ ಅಂಬಾನಿ ರಿಲಯನ್ಸ್ ಪವರ್ ಮಂಡಳಿಯಿಂದ ಕೆಳಗಿಳಿಯುತ್ತಾರೆ” ಎಂದು ರಿಲಯನ್ಸ್ ಪವರ್ ಬಿಎಸ್ ಇ ಫೈಲಿಂಗ್ ನಲ್ಲಿ ತಿಳಿಸಿದೆ.

- Advertisement -

ಸೆಬಿ ಫೆಬ್ರವರಿಯಲ್ಲಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಇತರ ಮೂವರು ವ್ಯಕ್ತಿಗಳನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಕಂಪನಿಯಿಂದ ಹಣವನ್ನು ಉಪಯೋಗಿಸಿಕೊಂಡ  ಆರೋಪದ ಮೇಲೆ ನಿರ್ಬಂಧಿಸಿತ್ತು.

Join Whatsapp