ಇಬ್ಬರು‌ ಮಕ್ಕಳಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

Prasthutha|

ಬೆಂಗಳೂರು: ತನ್ನಿಬ್ಬರು ಮಕ್ಕಳಿಗೆ ಪೆಟ್ರೋಲ್ ಸುರಿದ ತಾಯಿಯೊಬ್ಬರು ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಂ ಗೊಲ್ಲಹಳ್ಳಿಯಲ್ಲಿ ನಡೆದಿದೆ.

- Advertisement -

ಗೊಲ್ಲಹಳ್ಳಿಯ ಮನೆಯಲ್ಲಿ ಮಂಗಳವಾರ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದ ಇಬ್ಬರು ಮಕ್ಕಳು ಹಾಗೂ ತಾಯಿ ಚಿಕಿತ್ಸೆ ಫಲಿಸದೇ ಬುಧವಾರ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ತಾಯಿ ಸಂಧ್ಯಾ(33), ಮತ್ತು ಆಕೆಯ 4 ಹಾಗೂ 2 ವರ್ಷದ ಮಕ್ಕಳು ಸಾವನ್ನಪ್ಪಿದ್ದಾರೆ. ಯಲಹಂಕ ನಗರದ ಸಂಧ್ಯಾ 5 ವರ್ಷಗಳ ಹಿಂದೆ ಎಸ್ ಎಂ ಗೊಲ್ಲಹಳ್ಳಿಯ ಶ್ರೀಕಾಂತ್ ಜೊತೆ ವಿವಾಹವಾಗಿದ್ದರು. ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಶ್ರೀಕಾಂತ್ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡಿದ್ದರು.

- Advertisement -

ಪತಿ, ಮಕ್ಕಳು ಮತ್ತು ಅತ್ತೆ ಮಾವನ ಜೊತೆ ಸಂಧ್ಯಾ ಜೀವನ ನಡೆಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಸಂಧ್ಯಾ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಕ್ಕೆ ಇನ್ನೂ ಕಾರಣ ಪತ್ತೆಯಾಗಿಲ್ಲ.

ಅತ್ತೆ-ಮಾವ ಹೊರ ಹೋಗಿದ್ದರು ಮತ್ತು ಗಂಡ ಕೆಲಸಕ್ಕೆ ಹೋದಾಗ ಮೊದಲು 5 ಲೀಟರ್ ಪೆಟ್ರೋಲ್ ಅನ್ನು ತನ್ನ ಇಬ್ಬರು ಮಕ್ಕಳ ಮೇಲೆ ಸುರಿದು ನಂತರ ತನ್ನ ಮೇಲೂ ಸುರಿದುಕೊಂಡು ಸಂಧ್ಯಾ ಬೆಂಕಿ ಇಟ್ಟುಕೊಂಡಿದ್ದಾಳೆ. ಉರಿಯುತ್ತಿದ್ದ ಬೆಂಕಿಯ ಜ್ವಾಲೆಯಲ್ಲಿ ಇಬ್ಬರು ಮಕ್ಕಳನ್ನು ಬಲವಾಗಿ ಹಿಡಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದುಬಂದಿದೆ.

Join Whatsapp