ಮನೆಯಿಂದ ತಪ್ಪಿಸಿಕೊಂಡಿದ್ದ ಸಿಂಹವನ್ನು ಹೊತ್ತುಸಾಗಿದ ಮಹಿಳೆ !

Prasthutha|

ಕುವೈತ್: ಮನೆಯಿಂದ ಹೊರ ಹೋಗಿದ್ದ ‘ಸಾಕುಪ್ರಾಣಿ’ಯೊಂದನ್ನು ಮಹಿಳೆಯೊಬ್ಬರು ಮರಳಿ ಮನೆಗೆ ಕರೆತರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೆ ಮಹಿಳೆಯ ಕೈಯಲ್ಲಿರುವುದು ಸಾಮಾನ್ಯ ಸಾಕುಪ್ರಾಣಿಯಲ್ಲ, ಕಾಡಿನ ರಾಜ ಸಿಂಹ !

- Advertisement -
https://twitter.com/lustrousloey/status/1477986482531016705

ಕುವೈತ್​ ನಗರದ ಬೀದಿಯಲ್ಲಿ ಮಹಿಳೆಯೊಬ್ಬಳು ತನ್ನ ತೋಳುಗಳಲ್ಲಿ ಬೆಕ್ಕನ್ನು ಕೊಂಡೊಯ್ಯುವ ರೀತಿಯಲ್ಲಿ ಕಾಡಿನ ರಾಜ ಸಿಂಹವನ್ನು ಹೊತ್ತು ಸಾಗುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಮನೆಯಲ್ಲಿ ಸಾಕಿದ್ದ ಸಿಂಹವು ಬೋನಿ​ನಿಂದ ತಪ್ಪಿಸಿಕೊಂಡು ಕುವೈತ್​’ನ ಸಬಾಹಿಯಾ ವಸತಿ ಪ್ರದೇಶದಲ್ಲಿ ಅಡ್ಡಾಡುವ ಮೂಲಕ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಬಳಿಕ ಹಿಜಾಬ್ ಧರಿಸಿದ ಮಹಿಳೆಯೊಬ್ಬರು ತನ್ನ ತೋಳುಗಳಲ್ಲಿ ಸಿಂಹವನ್ನು ಹೊತ್ತುಕೊಂಡು ಬೀದಿಯಲ್ಲಿ ನಡೆದು ಹೋಗುತ್ತಿರುವ ಹಾಗೂ ಸಿಂಹವು ಮಹಿಳೆಯಿಂದ ಬಿಡಿಸಿಕೊಳ್ಳಲು ಯತ್ನಿಸಿ, ಗರ್ಜಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

 ಸಿಂಹ – ಚಿರತೆ- ಹುಲಿಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವುದು ಕುವೈತ್​’ನ ಮೂಲ ನಿವಾಸಿಗಳ ಪ್ರಮುಖ ಹವ್ಯಾಸಗಳಲ್ಲಿ ಒಂದಾಗಿದೆ.  

Join Whatsapp