ಅನಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

Prasthutha|

ಮಂಗಳೂರು: ಹಲವು ಕಾರ್ಯಕ್ರಮಗಳ ಮೂಲಕ ಸೇವಾ ರಂಗದಲ್ಲಿ ಜನ ಮನ್ನಣೆ ಪಡೆದ ಲತೀಫ್ ಗುರುಪುರ ನೇತೃತ್ವದ ಅನಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಹತ್ತು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉಚ್ಚಿಲ ಸೋಮೇಶ್ವರ ಕಿಯಂಝಾ ಗಾರ್ಡನ್ ನಲ್ಲಿ ನಡೆಯಿತು.

- Advertisement -

ಪಾಣಕ್ಕಾಡ್ ಸ್ವಾಬಿಕಲಿ ಶಿಹಾಬ್ ತಂಙಳ್ ದುಆ ನೆರವೇರಿಸಿದ ಕಾರ್ಯಕ್ರಮದಲ್ಲಿ ಸೆಯ್ಯದ್ ಅಲೀ ತಂಙಳ್ ಕುಂಬೋಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಯ್ಯದ್ ಜಿಫ್ರಿ ತಂಗಳ್ ಬೆಳ್ತಂಗಡಿ ಕಾರ್ಯಕ್ರಮ ಉದ್ಘಾಟಿಸಿದರು.

ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೇತೃತ್ವ ವಹಿಸಿದರು. ಸಯ್ಯದ್ ಜಮಲುಲ್ಲೈಲಿ ತಂಙಳ್ ಕಾಜೂರು ಲೋಗೋ ಬಿಡುಗಡೆಗೊಳಿಸಿದರು.

- Advertisement -

ಸಮಸ್ತ ಮುಶಾವರ ಬಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉಸ್ಮಾನುಲ್ ಫೈಝಿ ತೋಡಾರ್, ಫಿರೋಝ್ ಕುಂನ್ನುಪರಂಬಿಲ್, ಬದ್ರುದ್ದೀನ್ ಅಝ್ಹರಿ, ಹುಸೈನ್ ದಾರಿಮಿ, ಎಸ್.ಬಿ ದಾರಿಮಿ, ಅನೀಸ್ ಕೌಸರಿ ರಫೀಕ್ ಮಾಸ್ಟರ್, ಝಕಾರಿಯ ಮೋಡುಶೆಡ್ಡೆ, ಸಹೋದರ ಬಶೀರ್, ಖಲೀಲ್ ಒಗ್ಗ, ನೌಶಾದ್ ಇನೋಳಿ ಮತ್ತಿತರರು ಉಪಸ್ಥಿತರಿದ್ದರು.

ಜಮಾಲುದ್ದೀನ್ ದಾರಿಮಿ ಕುತುಬಾ ಪಾರಾಯಣ ನೆರವೇರಿಸಿದರು. ಸಂಘಟಕರಾದ ಇಮ್ರಾನ್ ಅಡ್ಡೂರು ಸ್ವಾಗತಿಸಿ, ಇಕ್ಬಾಲ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು.

Join Whatsapp