ಸಂಘಪರಿವಾರದಿಂದ ಹತ್ಯೆಗೀಡಾಗಿದ್ದ ರಿಯಾಝ್ ಮೌಲವಿ ಪರ ವಾದಿಸುತ್ತಿದ್ದ ವಕೀಲ ನಿಗೂಢ ಮೃತ್ಯು

Prasthutha|

ಕಾಸರಗೋಡು: ಸಂಘಪರಿವಾರದಿಂದ ಹತ್ಯೆಗೀಡಾಗಿದ್ದ ರಿಯಾಝ್ ಮೌಲವಿ ಪರ ವಾದಿಸುತ್ತಿದ್ದ ಸ್ಪೆಷಲ್‌ ಪ್ರಾಸಿಕ್ಯೂಟರ್ ನಿಗೂಢವಾಗಿ ಮೃತಪಟ್ಟಿದ್ದು, ಅವರ ಮೃತದೇಹ ಕೊಚ್ಚಿಯ ಫ್ಲ್ಯಾಟೊಂದರಲ್ಲಿ ಪತ್ತೆಯಾಗಿದೆ.

- Advertisement -

ಕಲ್ಲಿಕೋಟೆ ಐಎಂಎ ಹಾಲ್‌ ರಸ್ತೆ ನಡಕ್ಕಾವು ಮೂಲದ ಖ್ಯಾತ ವಕೀಲ ಎಂ.ಅಶೋಕನ್‌ ಅವರು ನಿಗೂಢವಾಗಿ ಮೃತಪಟ್ಟಿದ್ದು, ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ.

ನ್ಯಾ| ಅಶೋಕನ್ ಅವರು ಪ್ರಕರಣವೊಂದರಲ್ಲಿ ವಾದಿಸಲು ಎರ್ನಾಕುಳಂ ಜಿಲ್ಲೆಯ ಮಾವೇಲಿಕ್ಕರೆಗೆ ಹೋಗಿದ್ದರು. ಅಲ್ಲಿ ಅವರು ಫ್ಲ್ಯಾಟೊಂದರಲ್ಲಿ ತಂಗಿದ್ದು, ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಕಾಸರಗೋಡಿನಲ್ಲಿ ಮದ್ರಸಾ ಅಧ್ಯಾಪಕರಾಗಿದ್ದ ರಿಯಾಝ್ ಮೌಲವಿ (28) ಅವರನ್ನು 2017 ಮಾರ್ಚ್‌ 21ರಂದು ಮಸೀದಿಯೊಳಗೆ ನುಗ್ಗಿ ಸಂಘಪರಿವಾರದ ಕಾರ್ಯಕರ್ತರು ಬರ್ಬರವಾಗಿ ಹತ್ಯೆಗೈದಿದ್ದರು.